ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆ.ಪೋಲೀಸರ ಕಣ್ಗಾವಲಿನಲ್ಲಿನಲ್ಲಯೇ ನಡೀತಾ ಇದೆ ಅಂತೆ ಬಡ್ಡಿ ವ್ಯವಹಾರ.ಕೆಲವು ಕ್ರೈಂ ಪೋಲೀಸರಿಂದಲೂ ಬಡ್ಡಿ ದಂಧೆ..

Share to all

ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆ.ಪೋಲೀಸರ ಕಣ್ಗಾವಲಿನಲ್ಲಿನಲ್ಲಯೇ ನಡೀತಾ ಇದೆ ಅಂತೆ ಬಡ್ಡಿ ವ್ಯವಹಾರ.ಕೆಲವು ಪೋಲೀಸರಿಂದಲೂ ಬಡ್ಡಿ ದಂಧೆ..

ಹುಬ್ಬಳ್ಳಿ:-ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಗಾಂಜಾ,ಡ್ರಗ್ಸ್ ದಂಧೆಗಿಂತಲೂ ಮೀಟರ್ ಬಡ್ಡಿ ದಂಧೆ ಭಯಾನಕವಾಗಿದೆ.ವಾಣಿಜ್ಯ ನಗರಿಯಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಬೆಳೆದು ಬಿಟ್ಟಿದೆ.ಪೋಲೀಸರು ಚಾಪೆ ಕೆಳಗೆ ನುಸುಳಿದರೆ ದಂಧೆಕೋರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

ಅಷ್ಟೇ ಅಲ್ಲದೇ ಅವಳಿ ನಗರದಲ್ಲಿ ಬಡ್ಡಿ ದಂಧೆಯನ್ನ ಕೆಲವು ಠಾಣೆಗಳಲ್ಲಿ ಪೋಲೀಸರೇ ಮಾಡುತ್ತಿರುವಾಗ ಬಡ್ಡಿ ದಂಧೆಕೋರರನ್ನ ಪೋಲೀಸರು ಹೇಗೆ ಕಂಟ್ರೋಲ್ ಮಾಡ್ತಾರೆ ಹೇಳಿ.ಇತ್ತೀಚೆಗಂತೂ ಮೀಟರ್ ದಂಧೆ ಕೆಲವರ ಕೊಲೆ ಮಾಡುವ ಹಂತಕ್ಕೂ ನಡೆದಿದೆ.ಇದೆಲ್ಲವೂ ಪೋಲೀಸರಿಗೆ ಗೊತ್ತು ಇಲ್ಲವಂತಲ್ಲಾ.ಗೊತ್ತಿದ್ದರೂ ಪೋಲೀಸರು ಬಡ್ಡಿ ದಂಧೆಕೋರರನ್ನ ರಕ್ಷಣೆ ಮಾಡತಾ ಇದ್ದಾರೆ.

ನಗರದ ಬೆಂಡಿಗೇರಿ ಮತ್ತು ಕೇಶ್ವಾಪುರ ಪೋಲೀಸ ಠಾಣೆಯ ವ್ಯಾಪ್ತಿಯಲ್ಲಿ ಈ ಬಡ್ಡಿ ದಂಧೆಕೋರರ ಪ್ಯಾಕ್ಟರಿಯೇ ಇವೆ.ದಿನದ ಬಡ್ಡಿ, ವಾರದ ಬಡ್ಡಿ,ತಿಂಗಳ ಬಡ್ಡಿ ಹೀಗೆ ನಡೆಯುತ್ತಿವೆ.ಅವರು ಪಡೆಯುವ ಬಡ್ಡಿ ಕೇಳಿದರೆ ಕಮೀಷನರ ಸಾಹೇಬ್ರೇ ನೀವು ಹೌಹಾರತೀರಾ.ದಿನಕ್ಕೆ ನೂರು ರೂಪಾಯಿಗೆ ಹತ್ತು ರೂಪಾಯಿ ಬಡ್ಡಿಯಂತೆ.

ಈಗಾಗಲೇ ಪೋಲೀಸ ಕಮೀಷನರ್ ಮೀಟರ್ ಬಡ್ಡಿ ದಂಧೆಕೋರರಿಗೆ ವಾರ್ನಿಂಗ್ ಕೊಟ್ಟಿದ್ದು.ಗಾಂಜಾ,ಡ್ರಗ್ಸ್ ಡ್ರೈವ್ ಮಾಡಿದಂತೆ ಮೀಟರ್‌ ಬಡ್ಡಿ ಡ್ರೈವ್ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author