ಮಂಡ್ಯ: ಮಂಡ್ಯದಲ್ಲೊಂದು ಆನ್ ಲೈನ್ ದೋಖಾ ಕೇಸ್ ದಾಖಲಾಗಿದೆ. 60 ವರ್ಷದ ವೃದ್ದನಿಗೆ 20 ವರ್ಷ ಯುವತಿ ವಾಟ್ಸ್ ಅಪ್ ನಲ್ಲಿ ಚಾಟಿಂಗ್ ಮಾಡಿ ಆನ್ ಲೈನ್ ನಲ್ಲಿಯೇ ಹಣ ವಸೂಲಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಜಯಕಮಾರ್ ಹಣ ಕಳೆದುಕೊಂಡ ವೃದ್ದನಾಗಿದ್ದು, ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್ ನಲ್ಲಿ ಯುವತಿ ಪರಿಚಯವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಬೆಲೇದಿದ್ದು, ಯುವತಿ ಹಲವು ಕಾರಣ ಹೇಳಿ ಆಗಾಗ ಹಣ ಕೇಳಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಳು. ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿದ್ದಾಳೆ. ಯುವತಿಯು ಸಿಗದೇ, ಹಣ ವಾಪಸ್ಸು ಬರದೇ ಕಂಗಾಲಾದ ವೃದ್ದ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.