ಜನತಾ ದರ್ಶನದಲ್ಲಿ ಶಾಸಕರ ಹುಚ್ಚಾಟ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೈಕ್ ಹಿಡಿದು ಕಿತ್ತಾಡಿಕೊಂಡ ಜನನಾಯಕರು.

Share to all

ಜನತಾ ದರ್ಶನದಲ್ಲಿ ಶಾಸಕರ ಹುಚ್ಚಾಟ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೈಕ್ ಹಿಡಿದು ಕಿತ್ತಾಡಿಕೊಂಡ ಜನನಾಯಕರು.

ಹಾಸನ –

ಜನತಾ ದರ್ಶನ ಕಾರ್ಯಕ್ರಮವೊಂದರಲ್ಲಿ ಇಬ್ಬರು ಶಾಸಕರು ಕಿತ್ತಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.ಹೌದು ವೇದಿಕೆಯ ಮೇಲೆ ಆ ಇಬ್ಬರು ಶಾಸಕರು ಕಿತ್ತಾಡಿಕೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನಡುವೆ ಈ ಒಂದು ಟಾಕ್ ವಾರ್ ನಡೆದಿದೆ.ಮೈಕ್ ಹಿಡಿದು ಸಭೆಯಲ್ಲಿ ಬೈಯ್ದಾಡಿಕೊಂಡಿದ್ದಾರೆ ಶಾಸಕರುಗಳು.ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಈ ಒಂದು ಕಿತ್ತಾಡಿಕೊಂಡಿದ್ದಾರೆ.ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ಒಂದು ಗದ್ದಲ ಗಲಾಟೆ ನಡೆದಿದೆ.ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಎದುರೇ ಈ ಒಂದು ಗಲಾಟೆ ನಡೆದಿದೆ.ಇಬ್ಬರ ಕಾರ್ಯಕರ್ತರ ನಡುವೆಯೂ ಗದ್ದಲ ಗಲಾಟೆಯಾಗಿದ್ದು ಮೊದಲು ಭಾಷಣ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು

ಶಿವಲಿಂಗೇಗೌಡರು.ನಂತರ ಬಿಜೆಪಿಯ ಶಾಸಕ ಸುರೇಶ್ ಭಾಷಣ ಮಾಡಿ ಶಿವಲಿಂಗೇಗೌಡ್ರ ಎಲ್ಲಾ ಆರೋಪಗಳಿಗೂ ಟಾಂಗ್ ನೀಡಿದರು.ಸುರೇಶ್ ಭಾಷಣ ಆಗ್ತಿದ್ದಂತೆ ಮತ್ತೆ ಶಿವಲಿಂಗೇಗೌಡ ಭಾಷಣ ಮಾಡಿ ಟಾಂಗ್ ಕೊಡೋದಕ್ಕೆ ಮುಂದು ಬಂದರು.ಆಗ ಮತ್ತೊಂದು ಮೈಕ್ ತೆಗೆದುಕೊಂಡ ಸುರೇಶ್ ಅವರು ಆಗ ಇಬ್ಬರೂ ಒಂದೊಂದು ಮೈಕ್ ಹಿಡಿದು ಟಾಕ್ ವಾರ್ ಆರಂಭ ಮಾಡಿದರು.ಮೈಕ್ ಹಿಡಿದು ಜನರು ಎದುರೇ ಬೈದಾಡಿಕೊಂಡಿದ್ದಾರೆ ಆ ಇಬ್ಬರು ಶಾಸಕರು.ಬಳಿಕ ಇಬ್ಬರು ಶಾಸಕರ ಬೆಂಬಗರ ನಡುವೆ ಗಲಾಟೆ ಕೂಡಾ ನಡೆದಿದೆ.ಮೇಲಗಡೆ ಶಾಸಕರು ಕಿತ್ತಾಡಿಕೊಳ್ಳುತ್ತಿದ್ದರೆ ಇತ್ತ ಕೆಳಗಡೆ ಎಲ್ಲವನ್ನೂ‌ ನೋಡುತ್ತಾ ಸುಮ್ಮನೆ ಕುಳಿತಿದ್ದ ಉಸ್ತುವಾರಿ ಕೆ.ಎನ್.ರಾಜಣ್ಣ.

ಉದಯ ವಾರ್ತೆ ಹಾಸನ


Share to all

You May Also Like

More From Author