ಮಣ್ಣು ಲೂಟಿ ಪ್ರಕರಣ”- ಪ್ರಕರಣದಿಂದ ಬಚಾವಾಗಲು “ಭ್ರಷ್ಟರ” ಹರಸಾಹಸ…!!! ನಕಲಿ ದಾಖಲೆ ಸೃಷ್ಟಿಸಲು ಅಧಿಕಾರಗಳೇ ಸಾಥ್ ನೀಡಿದರಾ…!!!!

Share to all

“ಮಣ್ಣು ಲೂಟಿ ಪ್ರಕರಣ”- ಪ್ರಕರಣದಿಂದ ಬಚಾವಾಗಲು “ಭ್ರಷ್ಟರ” ಹರಸಾಹಸ…!!!
ನಕಲಿ ದಾಖಲೆ ಸೃಷ್ಟಿಸಲು ಅಧಿಕಾರಗಳೇ ಸಾಥ್ ನೀಡಿದರಾ…!!!!

ನವಲಗುಂದ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಗುಡ್ಡದ ಮಣ್ಣು ಕದ್ದಿರುವ ಪ್ರಕರಣದಿಂದ ಬಚಾವಾಗಲು ಭ್ರಷ್ಟರು ಹರಸಾಹಸ ನಡೆಸುತ್ತಿದ್ದು, ಅದಕ್ಕಾಗಿ ವ್ಯವಸ್ಥಿತಿ ಕುತಂತ್ರ ಮಾಡುವುದು ರಹಸ್ಯವಾಗಿ ಉಳಿದಿಲ್ಲ.

 

ನವಲಗುಂದ ಗುಡ್ಡದ ಮಣ್ಣನ್ನ ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ಪಡೆಯದೇ ಇರುವುದು ಬಹಿರಂಗವಾಗುತ್ತಿದ್ದ ಹಾಗೇ, ಭ್ರಷ್ಟರು ಹಳೇಯ ದಾಖಲೆಗಳನ್ನ ಸೃಷ್ಟಿ ಮಾಡಲು ಮುಂದಾಗಿದ್ದಾರೆ.
ಅಂಕೋಲಾ ಹಾಗೂ ವಾಯನಾಡಿನಲ್ಲಿ ಗುಡ್ಡ ಕುಸಿತದ ಪ್ರಕರಣಗಳು ಕಣ್ಣು ಮುಂದೆ ಇದ್ದಾಗಲೂ ಗುಡ್ಡದ ಮಣ್ಣನ್ನ ಕಾನೂನು ಬಾಹಿರವಾಗಿ ತೆಗೆಯುತ್ತಿರುವುದಲ್ಲದೇ, ಹಾಕಿರುವ ಮಣ್ಣಿನ ರಸ್ತೆಗೆ ಲಕ್ಷಾಂತರ ರೂಪಾಯಿ ತೆಗೆದಿದ್ದು, ಇದೀಗ ಜಗಜ್ಜಾಹೀರಾಗಿದೆ.

ಈಗ ನಕಲಿ ದಾಖಲೆಗಳನ್ನ ಸೃಷ್ಟಿಸಲು ಪ್ರಮುಖ ಮಾಜಿ ಗುತ್ತಿಗೆದಾರ ಷಡ್ಯಂತ್ರ ರೂಪಿಸಿದ್ದು, ಆ ದಾಖಲೆಗಳು ಕೂಡಾ ಉದಯ ವಾರ್ತೆ ಗೆ ಲಭಿಸಿವೆ.

ಉದಯ ವಾರ್ತೆ
ನವಲಗುಂದ


Share to all

You May Also Like

More From Author