ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಒಲಿದು ಬಂದವು ಮೂರು ಪ್ರಶಸ್ತಿಗಳು.ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಅವರಿಂದ ಪ್ರಶಸ್ತಿ ಸ್ವೀಕಾರ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಒಲಿದು ಬಂದವು ಮೂರು ಪ್ರಶಸ್ತಿಗಳು.ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಅವರಿಂದ ಪ್ರಶಸ್ತಿ ಸ್ವೀಕಾರ.

ಬೆಂಗಳೂರು:-ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆ ಅಡಿ ಉತ್ತಮ ಸಾಧನೆಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಒಟ್ಟು ಮೂರು ಪ್ರಶಸ್ತಿಗಳು ಲಭಿಸಿದ್ದು, ಪ್ರಶಸ್ತಿ ಸಮಾರಂಭವು ಇಂದು ಬೆಂಗಳೂರಿನಲ್ಲಿ ಡಾ: ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಿಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ್ ಉಳ್ಳಾಗಡ್ಡಿ ರವರು, ಸಮುದಾಯ ವ್ಯವಹಾರಗಳ ಅಧಿಕಾರಿ ಶ್ರೀ ರಮೇಶ್ ನೂಲ್ವಿ, ಶ್ರೀ ಅರವಿಂದ್ ಜಮಖಂಡಿ, ಶ್ರೀಮತಿ ಸರೋಜಾ ಪೂಜಾರ್, ಅಭಿಯಾನ ವ್ಯವಸ್ಥಾಪಕರು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಪಾಲಿಕೆಯ ವ್ಯಾಪ್ತಿಯ ಫಲಾನುಭವಿಗಳು, ಪಟ್ಟಣ ಸಮಿತಿ ಸಭೆಯ ಸದಸ್ಯರು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.

ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸೂಕ್ತ ಸಲಹೆ ಹಾಗೂ ಸಹಕಾರ ನೀಡಿದ ಮಾನ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕರಾದ ಪಿ ಐ ಶ್ರೀವಿದ್ಯಾ, ಶ್ರೀಮತಿ ದಿವ್ಯಾ ಪ್ರಭು ಜಿ. ಆರ್.ಜೆ ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು ಧಾರವಾಡ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು, ಪಟ್ಟಣ ಮಾರಾಟ ಸಮಿತಿ ಸದಸ್ಯರು, ಎಲ್ಲ ಬ್ಯಾಂಕ್ ವ್ಯವಸ್ಥಾಪಕರುಗಳಿಗೆ, ಆಯುಕ್ತರಾದ ಡಾ: ಈಶ್ವರ ಉಳ್ಳಾಗಡ್ಡಿ ರವರು ಅಭಿನಂದನೆ ಸಲ್ಲಿಸಿದರು.

ಯೋಜನೆಯ ಯಶಸ್ಸಿಗೆ ಶ್ರಮಿಸಿದ ಸಮುದಾಯ ವ್ಯವಹಾರ ಅಧಿಕಾರಿಗಳು, ಅಭಿಯಾನ ವ್ಯವಸ್ಥಾಪಕರು, ಸಮುದಾಯ ಸಂಘಟಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಡೇಟಾ ಎಂಟ್ರಿ ಆಪರೇಟರಗಳನ್ನು ಕೂಡ ಮಾನ್ಯ ಆಯುಕ್ತರು ಶ್ಲಾಘಿಸಿದರು.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author