ಜಲಮಂಡಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ವರ್ಗಾವಣೆ: ರಾತ್ರೋ ರಾತ್ರಿ ಕೈಗೊಂಡ ನಿರ್ಧಾರಕ್ಕೆ ಕಾರಣ ಏನು!?

Share to all

ಬೆಂಗಳೂರು:- ಜಲಮಂಡಳಿಯಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದ್ದು, ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ವರ್ಗಾವಣೆ ಆದವರಲ್ಲಿ ಹಲವರಿಗೆ ಮುಂಬಡ್ತಿ ನೀಡಲಾಗಿದ್ದು, ಕೆಲವರಿಗೆ ಡಬಲ್ ಪೋಸ್ಟಿಂಗ್ ಕೊಟ್ಟು ಯಡವಟ್ಟು ಮಾಡಲಾಗಿದೆ. ಹೀಗಾಗಿ, ಇದರ ಹಿಂದೆ ಲಕ್ಷ ಲಕ್ಷ ಡೀಲಿಂಗ್ ನಡೆದಿದೆಯಾ ಎಂಬ ಅನುಮಾನವೂ ವ್ಯಕ್ತವಾಗಿದೆ.

ಒಂದೇ ದಿನ 200ಕ್ಕೂ ಹೆಚ್ಚು ನೌಕರರ ಟ್ರಾನ್ಸ್​​​ಫರ್, ಪೋಸ್ಟಿಂಗ್ ಮಾಡಲಾಗಿದೆ. ನೂರಕ್ಕೂ ಹೆಚ್ಚು ನೌಕರರಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ. ಹಲವು ನೌಕರರಿಗೆ ಮಾಪನ ಹುದ್ದೆಯಿಂದ ಜಲಪರೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಜಲಮಂಡಳಿ ಇತಿಹಾಸದಲ್ಲೇ ಈ ರೀತಿ ರಾತ್ರೋರಾತ್ರಿ ವರ್ಗಾವಣೆ ಮಾಡಿರುವುದು ಮೊದಲು ಎನ್ನಲಾಗುತ್ತಿದೆ.

ವಾಟರ್ ಇನ್ಸ್​ಪೆಕ್ಟರ್, ಕ್ಲರ್ಕ್, ಹೆಲ್ಪರ್​ಗಳಿಗೆ ವರ್ಗಾವಣೆ ಭಾಗ್ಯ
ದೊರೆತಿದೆ. ಪೋಸ್ಟಿಂಗ್, ಟ್ರಾನ್ಸ್​ಫರ್​ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಆಡಳಿತಾಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷರಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಂಬಡ್ತಿಯಿಂದ ಜಲಮಂಡಳಿಗೆ ಹೆಚ್ಚು ಸಂಬಳ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಲದ ಸುಳಿಯಲ್ಲಿರುವ ಜಲಮಂಡಳಿಗೆ ಮುಂಬಡ್ತಿಯ ಹೊರೆ ಉಂಟಾಗಲಿದೆ. ಒಬ್ಬೊಬ್ಬರಿಗೆ ಎರಡೆರಡು ಪೋಸ್ಟಿಂಗ್ ನೀಡಿ ಯಡವಟ್ಟು ಮಾಡಿರುವುದು ಇನ್ನಷ್ಟು ಹೊರೆಯಾಗಲಿದೆ.


Share to all

You May Also Like

More From Author