ನಾನು 5 ಮಕ್ಕಳ ತಾಯಿಯಂದ್ರೂ ಬಿಡದೇ ಅತ್ಯಾಚಾರ: ರಾಜಕೀಯ ಮುಖಂಡನ ಮಗನಿಂದ ಕೃತ್ಯ!

Share to all

ಗಾಜಿಯಾಬಾದ್:- ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ರಸ್ತೆ ಬಳಿ ಮಹಿಳೆಯೊಬ್ಬರು ಅರೆನಗ್ನವಾಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ಅರೆನಗ್ನವಾಗಿ ಕುಳಿತ ಮಹಿಳೆ ರಾಜಕೀಯ ಮುಖಂಡನೋರ್ವನ ಮಗನ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿದ್ದಾರೆ.

ಆರೋಪಿ ನನ್ನನ್ನು ಪೊದೆಯೊಳಗೆ ಎಳೆದೊಯ್ದು ಮದ್ಯ ಕುಡಿದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಐದು ಮಕ್ಕಳ ತಾಯಿ, ನನ್ನನ್ನು ಬಿಟ್ಬಿಡು ಎಂದು ಕೈ ಮುಗಿದು ಬೇಡಿಕೊಂಡರೂ ಆತ ಕೇಳಲಿಲ್ಲ. ನನ್ನನ್ನು ಅತ್ಯಾಚಾರ ಮಾಡಿದ ಬಳಿಕವೇ ಆತ ಅಲ್ಲಿಂದ ಹೋದನು ಎಂದು ಮಹಿಳೆ ಆರೋಪಿಸಿದ್ದಾರೆ.

ಅತ್ಯಾಚಾರದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇ ಬಳಿಯ ಕೆಂಪು ಚೌಕ್‌ ಸಮೀಪದಲ್ಲಿ ಮಹಿಳೆ ಕುಳಿತುಕೊಂಡಿದ್ದರು. ಅಲ್ಲಿಗೆ ಬಂದ ಕೆಲವರು ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಪೊದೆಯೊಳಗೆ ಎಳೆದೊಯ್ದಿದ್ದಾರೆ. ನಂತರ ಅಲ್ಲಿಗೆ ಬಂದ ರಾಜಕೀಯ ಮುಖಂಡನ ಮಗ ಮದ್ಯ ಸೇವಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆನಂತರ ಮಹಿಳೆಯನ್ನು ರಾತ್ರಿ ಕೆಂಪು ಬಾವಿ ಬಳಿ ಬಿಟ್ಟು ಹೋಗಿದ್ದಾರೆ.

ಅರೆನಗ್ನಳಾಗಿ ಕುಳಿತು ಮಹಿಳೆ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಾರ್ವಜನಿಕರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು, ಕಾಮುಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ.


Share to all

You May Also Like

More From Author