Lausanne Diamond League: ಫೈನಲ್ ಪ್ರವೇಶಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ!

Share to all

ಈ ವರ್ಷದ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್​ ಫೈನಲ್​ ಪ್ರವೇಶಿಸಿದ್ದಾರೆ. ಡೈಮಂಡ್ ಲೀಗ್​ನಲ್ಲಿ 89.49 ಮೀ. ಜಾವೆಲಿನ್​ ಎಸೆಯುವ ಮೂಲಕ ಋತುವಿನ ಅತ್ಯುತ್ತಮ ಎಸೆತದೊಂದಿಗೆ 2 ನೇ ಸ್ಥಾನ ಪಡೆದು ಫೈನಲ್​ ಪ್ರವೇಶಿಸಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ನಡೆಯುವ ಕೊನೆಯ ಡೈಮಂಡ್‌ ಲೀಗ್​ನಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಈ ಎಸೆತವನ್ನು ಇಲ್ಲಿ ಉತ್ತಮಪಡಿಸಿಕೊಂಡರು.

ಗುರುವಾರ ತಡರಾತ್ರಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು. ನೀರಜ್ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್‌ ದೂರವನ್ನು ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ನೀರಜ್​ ಈ ಸ್ಪರ್ಧೆಗೂ ಮುನ್ನ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದರು. ಇದೀಗ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಫೈನಲ್​ನಲ್ಲಿ 6 ಮಂದಿ ಕಣಕ್ಕಿಳಿಯಲಿದ್ದಾರೆ.


Share to all

You May Also Like

More From Author