ಕುಸ್ತಿ ಪಟು ಕಾವ್ಯಾ ಪೂಜಾರ್ ಆತ್ಮಹತ್ಯೆ –  ಗರಡಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಯುವ ಕುಸ್ತಿ ಪಟು

Share to all

ಕುಸ್ತಿ ಪಟು ಕಾವ್ಯಾ ಪೂಜಾರ್ ಆತ್ಮಹತ್ಯೆ –  ಗರಡಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಯುವ ಕುಸ್ತಿ ಪಟು

ದಾವಣಗೆರೆ –

ಕುಸ್ತಿಪಟು ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಹೌದುಹರಿಹರದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಕಾವ್ಯಾ ಪೂಜಾರ್(13)ಅತ್ಮಹತ್ಯೆಗೆ ಶರಣಾದ ಬಾಲಕಿಯಾಗಿದ್ದಾಳೆ. ಧಾರವಾಡ ಕುಸ್ತಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಕಾವ್ಯ ಪೂಜಾರಿ ಎರಡು ದಿನಗಳ ಹಿಂದೆ ಹರಿಹರಕ್ಕೆ ಬಂದಿದ್ದಳು.ಬೆಳಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾಳೆ.ಅತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತಂತೆ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು ಇತ್ತ ಏನೇನು ಆಗಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದ ಬಾಲಕಿಯ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಮಾಡುತ್ತಿದ್ದಾರೆ.

ಉದಯ ವಾರ್ತೆ ದಾವಣಗೆರೆ


Share to all

You May Also Like

More From Author