ಬೆಳ್ಳಂ ಬೆಳೆಗ್ಗೆ ಕಮೀಷನರ್ ಮೂರು ಘಂಟೆ ಸಿಟಿ ರೌಂಡ್ಸ್..ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ.ಕಮೀಷನರ್ ಗೆ ಕೈ‌ಮುಗಿದ ಸಾರ್ವಜನಿಕರು.

Share to all

ಬೆಳ್ಳಂ ಬೆಳೆಗ್ಗೆ ಕಮೀಷನರ್ ಮೂರು ಘಂಟೆ ಸಿಟಿ ರೌಂಡ್ಸ್..ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ.ಕಮೀಷನರ್ ಗೆ ಕೈ‌ಮುಗಿದ ಸಾರ್ವಜನಿಕರು.

ಹುಬ್ಬಳ್ಳಿ:- ಇಂದು ಬೆಳ್ಳಂ ಬೆಳೆಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:-ಈಶ್ವರ ಉಳ್ಳಾಗಡ್ಡಿ ಹಾಗೂ ಮೇಯರ್ ರಾಮಣ್ಣ.ಬಡಿಗೇರ ಜೋನ್ ಏಳರ ವ್ಯಾಪ್ತಿಯಲ್ಲಿ ದಿಡೀರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.ಅಲ್ಲದೇ ಕೆಲ ಸಮಸ್ಯೆಗಳಿಗೆ ಅಧಿಕಾರಿಗಳಿಗೆ ಸೂಚಿಸಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿದರು.

ಇದೇ ಮೊದಲ ಬಾರಿಗೆ ಪಾಲಿಕೆಯ ಕಮೀಷನರ್ ಮನೆ ಮನೆಗೆ ಮಹಾನಗರ ಪಾಲಿಕೆ ಎಂಬ ದ್ಯೇಯದೊಂದಿಗೆ ಜನರ ಮನೆಗೆ ಭೇಟಿ ಕೊಟ್ಟು ಅವರ ಸಮಸ್ಯೆ ಆಲಿಸುವ ಪ್ರಯತ್ನ ಮಾಡುತ್ತಿದ್ದಾರೆ.ಕಮೀಷನರ್ ಅವರ ಮನೆ ಮನೆಗೆ ಮಹಾನಗರ ಪಾಲಿಕೆ ಕಾರ್ಯಕ್ರಮದಿಂದ ಕಮೀಷನರ್ ಗೆ ಜನತೆ ಹ್ಯಾಂಡ್ಸ್ ಅಪ್ ಹೇಳಿದ್ದಾರೆ.

ಇಂದು ಜೋನ್ ಏಳರ ವ್ಯಾಪ್ತಿಯ ವಾಡ್೯ ನಂಬರ 51 ಹಾಗೂ 52 ರ ಡಾಲಸ್೯ ಕಾಲೋನಿ,ಅಕ್ಷಯ ಪಾಕ್೯, ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ದಿಡೀರ್ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ನೀಡಿದರು.ಅಲ್ಲದೇ ಅಧಿಕಾರಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಚಾಟೀ ಏಟು ಬೀಸಿದರು.

ಈ ಸಂದರ್ಭದಲ್ಲಿ ಎಸ್ ಡಬ್ಲು ಎಂನ ಮಲ್ಲಿಕಾರ್ಜುನ. ಜೋನಲ್ ಏಳರ ಸಹಾಯಕ ಆಯುಕ್ತ ಮಾಲಿಪಾಟೀಲ ಪಾಲಿಕೆಯ ಸದಸ್ಯ ಸಂದಿಲಕುಮಾರ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author