ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ ಮುನ್ನಲೆಗೆ ಬಂದಿವೆ. ಚೇರ್ ಮೇಲೆ ಕುಳಿತುಕೊಂಡು ದರ್ಶನ್ ಕೈಯಲ್ಲಿ ಟೀ ಕಪ್ ಮತ್ತು ಸಿಗರೇಟು ಸೇದುತ್ತಾ ರೌಡಿಗಳೊಂದಿಗೆ ಮಾತನಾಡುವ ಫೋಟೋ ವೈರಲ್ ಆಗಿದ್ದವು. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು.
ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿರೋ ಫೋಟೋ ವೈರಲ್ ಆಗುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಕೂಡ ದರ್ಶನ್ ಅವರನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡ್ತೇವೆ ಎಂದಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಿಗಿ ಭದ್ರತೆ ಮಾಡಲಾಗ್ತಿದೆ. ದು, ನಟ ದರ್ಶನ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡೋ ಸಾಧ್ಯತೆ ಹೆಚ್ಚಿದೆ. ಈ ಬೆನ್ನಲ್ಲೇ ಹಿಂಡಲಗಾ ಜೈಲಿನಲ್ಲಿ ಎಲ್ಲ ವ್ಯವಸ್ಥೆ ಈಗಾಗಲೇ ಮಾಡಿಕೊಳ್ಳಲಾಗ್ತಿದೆ ಅಂತ ಹೇಳಲಾಗ್ತಿದೆ.
ಸಿಎಂ ಸಿದ್ದರಾಮಯ್ಯ ಅವರೇ ಶಿಫ್ಟ್ ಬಗ್ಗೆ ಹೇಳಿರೋದ್ರಿಂದ ಹಿಂಡಲಗಾ ಜೈಲಿನ ಸಿಬ್ಬಂದಿಗಳು ಈಗಾಗಲೇ ಕೆಲಸಗಳನ್ನು ಶುರುಮಾಡಿದ್ದಾರಂತೆ. ಬಿಗಿ ಭದ್ರತೆ ಕೂಡ ಮಾಡಲಾಗಿದೆ. ಜಿ ಪರಮೇಶ್ವರ್ ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದಾದ ಬಳಿಕ ಶಿಫ್ಟ್ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಒಂದು ವೇಳೆ ಶಿಫ್ಟ್ ಅಂತಾದ್ರೆ ಮುಂದೆ ಏನೆಲ್ಲಾ ಆಗುತ್ತೆ ಅಂತ ಕಾದು ನೋಡಬೇಕಿದೆ.