ಬೈಕ್ ವ್ಹೀಲಿಂಗ್ ಮಾಡುವವರೇ ಹುಷಾರ್. ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ದ ಕ್ರಮ.ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಣ್ಣು.
ಹುಬ್ಬಳ್ಳಿ:-ಬೈಕ್ ವ್ಹೀಲಿಂಗ್ ಮಾಡುತ್ತಿದ್ದವರ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಕ್ರಮ ಕೈಕೊಳ್ಳುತ್ತಿದ್ದಾರೆ.ಕಾರವಾರ ರಸ್ತೆಯ ಅಂಚಟಗೇರಿ ಗ್ರಾಮದ ಬಳಿ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ಮೇಲೆ ಕ್ರಮ ಕೈಗೊಳ್ಳಲಾಗಿದೆ.
20 ವರ್ಷದ ಅಯಾನ.ಅಬ್ದುಲ್ ಶೇಖ್ ಎಂಬಾತನ ಮೇಲೆ ಕ್ರಮಕೈಕೊಂಡು ಇವರು ವ್ಹೀಲಿಂಗ್ ಮಾಡಲು ಉಪಯೋಗಿಸುತ್ತಿದ್ದ ವಾಹನ ವಶಪಡಿಸಿಕೊಂಡು ಕೇಸ್ ಮಾಡಿದ್ದಾರೆ.