ನವಲಗುಂದ ಗುಡ್ಡದ ಮಣ್ಣು ಕದ್ದವರ ಬಗ್ಗೆ ಕಣ್ಣು ಮುಚ್ಚಿದ “ಗಣಿ,ಭೂ ವಿಜ್ಞಾನ” ಇಲಾಖೆ: ಡಿಸಿಯವರೇ ಏನಂತೀರಾ…!?
ನವಲಗುಂದ: ಪಾರಂಪರಿಕವಾಗಿ ಇರುವ ಪಟ್ಟಣದ ಗುಡ್ಡವನ್ನ ನಾಶ ಮಾಡುವುದು ಜಗ್ಗಜ್ಜಾಹೀರಾದ ನಂತರವೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬರತೊಡಗಿವೆ.
ಪುರಸಭೆಯ ಒಡೆತನದಲ್ಲಿರುವ ಗುಡ್ಡವನ್ನ ಹಣದ ಆಸೆಗಾಗಿ “ರೈತರ” ಹೆಸರು ಬಳಕೆ ಮಾಡಿ ರಸ್ತೆಗಾಗಿ ಲೂಟಿ ಮಾಡಿದ್ದು, ಅದಕ್ಕಾಗಿ ಹೋರಾಟಗಳು ನಡೆದಿವೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಗುಡ್ಡದ ಮಣ್ಣು ತೆಗೆಯುತ್ತಿರುವವರ ವಿರುದ್ಧ ಪ್ರತಿಭಟನೆ ಮಾಡಿದ ತಕ್ಷಣವೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಐದಾರೂ ದಿನಗಳು ಕಳೆದಿವೆ. ಆದರೂ, ಯಾವುದೇ ಕ್ರಮ ಜರುಗಿಸಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ “ಮಣ್ಣಿನ” ಋಣ ಸಂದಾಯವಾಗಿದೇಯಾ ಎಂಬ ಪ್ರಶ್ನೆ ಕೂಡ ಎದ್ದಿದೆ.
ಉದಯ ವಾರ್ತೆ
ನವಲಗುಂದ