ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇದಿದ ಸಿಸಿಬಿ ಪೋಲೀಸರು.
ಹುಬ್ಬಳ್ಳಿ.
ಹುಬ್ಬಳ್ಳಿಯಲ್ಲಿ ಮುಂದುವರೆದ ಕ್ರಿಕೆಟ್ ಬೆಟ್ಟಿಂಗ್ ದಂಧೆ.ಇಂದು ಸೌಥ ಆಪ್ರೀಕಾ ಮತ್ತು ನೆದರ್ಲೆಂಡ್ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಜೂಜಾಟ ನಡೆಸಿದ್ದ ದೊಡ್ಡ ಜಾಲವೊಂದನ್ನು ಸಿಸಿಬಿ ಪೋಲೀಸರು ಭೇದಿಸಿದ್ದಾರೆ.
ಹುಬ್ಬಳ್ಳಿಯ ಕಮರೀಪೇಟೆಯ ಹತ್ತಿರ ಡಾಕಪ್ಪ ಸರ್ಕಲ್ ದ ಬಳಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿದ ಪೋಲೀಸರು ಮೂವರನ್ನು ಬಂದಿಸಿದ್ದು ಇಬ್ಬರು ಪ್ರಮುಖ ದಂಧೆಕೊರರು ಪರಾರಿಯಾಗಿದ್ದಾರೆ. ಬಂಧಿತರನ್ನು 1)ನವೀನ ಗಣಪತಿಸಾ ಜಿತೂರಿ 2)ಮಹ್ಮದ ಯರಗಟ್ಟಿ 3)ಪವನ.ತಪ್ಪಣ್ಣ.ಇರಕಲ್ ಎಂದು ಗುರುತಿಸಲಾಗಿದೆ.ಪರಾರಿಯಾದ ಪ್ರಮುಖ ಆರೋಪಿಗಳು 4)ಸಂತೋಷ ಕುರ್ಡೇಕರ್ 5)ಗಿರೀಶ ಎಂಬುವರು ಪ್ರಮುಖ ಬುಕ್ಕಿ ಎನ್ನಲಾಗಿದೆ. ಬಂಧಿತರಿಂದ ಎರಡು ಲಕ್ಷಕ್ಕೂ ಅಧಕ ನಗದು.ಮೂರು ಮೋಬ್ಯೆಲ್ ವಶಪಡಿಸಿಕೊಂಡು ಕಮರೀಪೇಟೆ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ