ಯುದ್ಧ ಗೆದ್ದು ಬಂದ ಮದ ಕರಿ ನಾಯಕನಿಗೆ ಸನ್ಮಾನವೋ ಸನ್ಮಾನ.ಕಾಯಕಯೋಗಿ,ಬಸವತತ್ವ ಪರಿಪಾಲಕನಿಗೆ ಬಹುಪರಾಕ..
ಹುಬ್ಬಳ್ಳಿ:- ಹಿಂಗ ಹೋಗಿ ಹಂಗ ಬಂದ ಹುಬ್ಬಳ್ಳಿಯಾಂವಗ ನಮ್ಮೂರ ಜನ ಇಡೀ ದಿನ ಸನ್ಮಾನವೋ ಸನ್ಮಾನ.ಕಾಯಕಯೋಗಿ,ಬಸವತತ್ವ ಪರಿಪಾಲಕ,ನವನಗರ ಮಾರುಕಟ್ಟೆ ಉನ್ನತೀಕರಣ ಮಾಡಿದ ಮಾರುಕಟ್ಟೆ ಪಿತಾಮಹ ಒಂದಾ ಎರಡ ಅವರನ್ನ ಹೊಗಳಿದ್ದೇ ಹೊಗಳಿದ್ದು.ಹೂವಿನ ಹಾರ ಹಾಕಿದ್ದೇ ಹಾಕಿದ್ದು..
ಯುದ್ಧ ಗೆದ್ದು ಬಂದ ಮದಕರಿ ನಾಯಕನಿಗೆ ನವನಗರದ ಜೋನಲ್ ನಾಲ್ಕರಲ್ಲಿ ಸನ್ಮಾನ,ಸತ್ಕಾರ,ಹೊಗಳಿಕೆ ನೋಡಿದರೆ ಅಬ್ಬಾ ಇದ್ದರೆ ಇರಬೇಕು ಇಂತಾ ಆಪೀಸರ ಅನ್ನದೇ ಹೋದವರೆ ಇಲ್ಲಾ.ಇಷ್ಟೆಲ್ಲಾ ಇವರನ್ನು ಹೊಗಳಿದ್ದು ಯಾಕೆ ಅಂತಾ ಹೇಳತೇವೆ ಕೇಳಿ.
ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಸಮುದಾಯ ಸಂಘಟನಾಧಿಕಾರಿ ಅಂತಾ ಬಂದು ಅಕ್ರಮವಾಗಿ ಜೋನಲ್ ಕಮೀಷನರ್ ಆಗಿ ಕೆಲಸ ಮಾಡಿದವರು.ಇವರನ್ನ ಸರಕಾರ ನಿಮ್ಮ ಸೇವೆ ಮಹಾನಗರ ಪಾಲಿಕೆಯಲ್ಲಿ ಸಾಕು ಎಂದು ಕುಂದಗೋಳ ಪಟ್ಟಣ ಪಂಚಾಯತಿಗೆ ಸಮುದಾಯ ಸಂಘಟನಾಧಿಕಾರಿ ಅಂತಾ ವರ್ಗಾವಣೆ ಮಾಡಿತು.
ಅಲ್ಲಿಂದ ನಾ ಹುಬ್ಬಳ್ಳಿ ಹೆಂಗ ಬಿಟ್ಟು ಹೋಗಲಿ ಅಂತಾ ಹುಬ್ಬಳ್ಳಿ to ಬೆಂಗಳೂರು ಅಲೆದರೂ ಲಾಭ ಮಾತ್ರ ಶೂನ್ಯ ಅಲೆದಾಡಿ ಅಂತಾ ತಿಳಿದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹುಬ್ಬಳ್ಳಿಗೆ ಬಂದು ಮತ್ತೆ ಹುಬ್ಬಳ್ಳಿ to ಧಾರವಾಡ ಅಲೆದು ಈಗ ಮತ್ತೆ ಅದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಡೆಪಿಟೇಷನ್ ಮೂಲಕ ಬಂದು ಒಕ್ಕರಿಸಿಕೊಂಡರು.
ಅವಾಗ ಪಾಲಿಕೆಯ ಕಮೀಷಮರ ಸಾಹೇಬ್ರಿಗೆ ಅದೊಂದು ಇದೊಂದು ಹೇಳೆ ಮತ್ತೆ ಅದೇ ನವನಗರದ ಜೋನಲ್ ನಂ:- 4 ಕ್ಕೆ ಜೋನಲ್ ಅಸಿಸ್ಟೆಂಟ್ ಕಮೀಷನರ ಆಗಿ ಚಾಜ್೯ ತೆಗೆದುಕೊಂಡಿದ್ದಾರೆ.ಇವರ ಮೂಲ ಹುದ್ದೆ ಸಮುದಾಯ ಸಂಘಟನಾಧಿಕಾರಿ ದರ್ಜೆ ಸಿ ಆದರೂ ಇವರು ಅಕ್ರಮವಾಗಿ ಕೆಎಎಸ್ ಹುದ್ದೆಯನ್ನು ಅಲಂಕರಿಸಿದ್ದಕ್ಕೆ ಸನ್ಮಾನವೋ ಸನ್ಮಾನ.ಅವರೇ ರಮೇಶ ನೂಲ್ವಿ.