ಮುಡಾ ಹಗರಣ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೈಸೂರಿನ ಮುಡಾ ಭ್ರಷ್ಟಾಚಾರ ಬಗೆದಷ್ಟು ಹೊರಬರುತ್ತಿದೆ. ಅದರಲ್ಲೂ ಅಧಿಕಾರಿಗಳು ಮಾಡಿರುವ ಕಳ್ಳಾಟ ಗೋಲ್ ಮಾಲ್ ಗಳ ದಾಖಲೆ ಕೂಡ ಸಿಕ್ಕಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಾಸಿಕ್ಯೂಷನ್ ವಿರುದ್ಧ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ.
ಇನ್ನು ಈ ಮುಡಾದಲ್ಲಿ ನಡೆದ ಹಗರಣ ಒಂದರ ಮೇಲೊಂದು ಆಚೆ ಬರಲಾರಂಭಿಸಿವೆ. ಸಾಮಾಜಿಕ ಹೋರಾಟಗಾರರು, ಆರ್ಟಿಐ ಕಾರ್ಯಕರ್ತರು ಒಂದೊಂದೇ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇವೆಲ್ಲದರ ಮಧ್ಯ ಮುಡಾದಲ್ಲಿ ಅಧಿಕಾರಿಗಳು ಮಾಡಿರುವ ಕಳ್ಳಾಟ ಗೋಲ್ ಮಾಲ್ ಗಳ ದಾಖಲೆ ಕೂಡ ಸಿಕ್ಕಿದೆ.
ಮುಡಾ ಹಗರಣದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಒಂದರ ಮೇಲೆ ಒಂದರಂತೆ ಆರೋಪಗಳ ಅಸ್ತ್ರಗಳನ್ನು ಪ್ರಯೋಗ ಮಾಡ್ತಿದ್ದಾರೆ. ಆದ್ರೇ ಯಾರು ಏನೇ ಹೇಳಿದ್ರು, ನಾನು ಜಗ್ಗಲ್ಲ ಬಗ್ಗಲ ಅಂತ ಹೇಳಿರುವ ಸಿದ್ದರಾಮಯ್ಯ, ಇದೀಗ ಬಿಜೆಪಿಗರ ವೈಟ್ನರ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ವೈಟ್ನರ್ ಹಾಕಿ ದಾಖಲೆಗಳು ತಿರುಚಿದ್ದಾರೆಂದು ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಅಂತ ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ವಾಲ್ಮೀಕಿ ಮತ್ತು ಮುಡಾ ಹಗರಣ ತಲೆ ನೋವಾಗಿ ಪರಿಣಮಿಸಿದೆ. ಈ ಹೊತ್ತಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್ ಅಂತ ಜೋಶಿ ಹೇಳಿದ್ದಾರೆ.ಕೇಂದ್ರ ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಸೃಷ್ಟಿಸಿದೆ. ಇದಷ್ಟೇ ಅಲ್ಲದೇ ಕಾಂಗ್ರೆಸ್ನಲ್ಲಿ ಹೊಸ ಸಿಎಂ ಬರ್ತಾರೆ ಅಂತ ಮತ್ತೊಮ್ಮೆ ಜೋಶಿ ಭವಿಷ್ಯ ನುಡಿದಿದ್ದಾರೆ. ಒಟ್ಟಾರೆ, ಮುಡಾ ಪ್ರಕರಣ ಸಿದ್ದರಾಮಯ್ಯ ಅವರ ಸಿಎಂ ಸೀಟು ಅಲಗಾಡಿಸುವಷ್ಟು ಬೆಳೆದು ನಿಂತಿದೆ. ಆದ್ರೆ ಇಡೀ ಹಸ್ತಪಡೆಯೇ ಸಿಎಂ ಬೆನ್ನಿಗೆ ನಿಂತಿದ್ದು, ಮುಂದೆನಾಗುತ್ತದೆ ಅಂತ ಕುತೂಹಲವು ಮೂಡಿದೆ