ಪುರಾಣದ ಪ್ರಕಾರ, ಶಾಸ್ತ್ರಗಳಲ್ಲಿ ಹಲ್ಲಿಗಳು ಮನೆಯಲ್ಲಿ ಲೊಚಗುಟ್ಟಿದ್ರೆ ಅವುಗಳು ಲೊಚಗುಟ್ಟಿದರ ಸಮಯ ಹಾಗೂ ಸಂದರ್ಭಕ್ಕೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಜೀವನದಲ್ಲಿ ಮನೆಯಲ್ಲಿ ಹಲ್ಲಿ ಇರುವುದರಿಂದ ಆರೋಗ್ಯಯುತ ಜೀವನಕ್ಕೆ ಸಂಚಕಾರಿ.. ಹಲ್ಲಿಯ ಮಲ ಮತ್ತು ಲಾಲಾರಸದಲ್ಲಿ ಇರುವ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ತುಂಬಾನೇ ಅಪಾಯಕಾರಿಯಾಗಿದೆ..
ಹೀಗಾಗಿಯೇ ಹಲ್ಲಿ ಬಿದ್ದ ಆಹಾರ ವಿಷವಾಗಿ ಮಾರ್ಪಡಲಿದೆ.. ಪರಿವಿಲ್ಲದೆ ಆಹಾರವನ್ನು ಸೇವನೆ ಮಾಡುವ ವ್ಯಕ್ತಿಯ ಜೀವಕ್ಕೆ ಸಂಚಕಾರ ತಂದೊಡ್ಡಲಿದೆ.. ಕೆಲವೊಮ್ಮೆ ಹಲ್ಲಿಬಿದ್ದ ಆಹಾರ ಸೇವಿಸಿದ ವ್ಯಕ್ತಿಯ ಸ್ಥಿತಿ ಗಂಭೀರವಾದ್ರೆ ಮತ್ತೆ ಕೆಲವೊಮ್ಮೆ ಆ ವ್ಯಕ್ತಿ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.. ಹೀಗಾಗಿ ಪ್ರತಿನಿತ್ಯ ನಾವು ಮನೆಯಲ್ಲಿ ಬಳಕೆ ಮಾಡುವ ವಸ್ತುಗಳನ್ನು ಬಳಸಿಕೊಂಡು ಸರಾಗವಾಗಿ ಹಲ್ಲಿಗಳನ್ನು ಮನೆಯಿಂದ ಹೊರ ಹಾಕಬಹುದಾಗಿದೆ..
ರೋಸ್ಮರಿ ಸಸ್ಯ:-
ರೋಸ್ಮರಿ ಸಸ್ಯದ ವಿಚಿತ್ರವಾದ ವಾಸನೆಯಿಂದ ಹಲ್ಲಿಗಳು ಮನೆಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ. ನಿಮ್ಮ ಮನೆಯಲ್ಲಿ ರೋಸ್ಮರಿ ಗಿಡವನ್ನು ನೆಡುವ ಮೂಲಕ ನೀವು ಹಲ್ಲಿಗಳನ್ನು ಓಡಿಸಬಹುದು. ಮನೆಯಲ್ಲಿ ಅದರ ಎಣ್ಣೆಯಿಂದ ಸ್ಪ್ರೇ ತಯಾರಿಸಬಹುದು ಮತ್ತು ಅದನ್ನು ಸಿಂಪಡಿಸಬಹುದು.
ಪುದೀನಾ:-
ಪುದೀನಾ ಹಲ್ಲಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪುದೀನಾ ಮೆಂಥಾಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಬಲವಾದ ವಾಸನೆಯನ್ನು ಹೊರಸೂಸುತ್ತದೆ. ಹಲ್ಲಿ ಈ ವಾಸನೆಯನ್ನು ಸಹಿಸುವುದಿಲ್ಲ. ಆದ್ದರಿಂದ ಮನೆಯಲ್ಲಿ ಪುದೀನಾ ಗಿಡವನ್ನು ನೆಟ್ಟು ಹಲ್ಲಿಗಳನ್ನು ಓಡಿಸಬಹುದು.
ಮಾರಿಗೋಲ್ಡ್ ಗಿಡ:
ಹಲ್ಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರಿಗೋಲ್ಡ್ ಗಿಡವನ್ನೂ ನೆಡಬಹುದು. ಇದರ ಹೂವುಗಳು ಪೈರೆಥ್ರಿನ್ ಮತ್ತು ಟ್ರೆಪೆಜಿಯಂ ಎಂಬ ಕೀಟನಾಶಕಗಳನ್ನು ಹೊಂದಿರುತ್ತವೆ. ಅದರ ವಾಸನೆ ಹಲ್ಲಿಗಳಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ. ಹೀಗಾಗಿ ಹಲ್ಲಿ ಮನೆಯಿಂದ ಹೊರ ಹೋಗುತ್ತವೆ.
ಲೆಮನ್ ಗ್ರಾಸ್:
ಮನೆಯಿಂದ ಹಲ್ಲಿಗಳನ್ನು ಓಡಿಸಲು ಲೆಮನ್ ಗ್ರಾಸ್ ನೆಡಬಹುದು. ಲೆಮನ್ ಗ್ರಾಸ್ ನಲ್ಲಿ ಸಿಟ್ರೋನಿಲ್ಲಾ ಎಂದು ಕರೆಯಲ್ಪಡುವ ವಿಶೇಷ ರೀತಿಯ ರಾಸಾಯನಿಕವಿದೆ. ಇದು ಒಂದು ರೀತಿಯ ಹುಲ್ಲು, ಅದರ ರುಚಿ ಹುಳಿಯಾಗಿರುತ್ತದೆ. ಇದರ ಹುಳಿ ವಾಸನೆಯಿಂದಾಗಿ ಹಲ್ಲಿಗಳು ಓಡಿಹೋಗುತ್ತವೆ.
ಲ್ಯಾವೆಂಡರ್ ಸಸ್ಯ:
ನಿಮ್ಮ ಮನೆಯಿಂದ ಹಲ್ಲಿಗಳನ್ನು ದೂರವಿರಿಸಲು ಲ್ಯಾವೆಂಡರ್ ಸಸ್ಯವನ್ನು ಸಹ ನೆಡಬಹುದು. ಲಿನೂಲ್ ಮತ್ತು ಮೊನೊಟರ್ಪೀನ್‌ಗಳಂತಹ ರಾಸಾಯನಿಕ ಸಂಯುಕ್ತಗಳು ಇದರಲ್ಲಿ ಕಂಡುಬರುತ್ತವೆ. ಇವು ಕೀಟನಾಶಕಗಳಾಗಿವೆ. ಅದರ ವಾಸನೆ ಬಂದ ತಕ್ಷಣ ಹಲ್ಲಿ ಮನೆಯಿಂದ ಹೊರಬರುವ ದಾರಿಯನ್ನು ಹುಡುಕಲು ಪ್ರಾರಂಭಿಸುತ್ತದೆ.