ಮಾದ್ಯಮಗಳ ವಿರುದ್ಧ ನಿರ್ಭಂದಕಾಜ್ಞೆ ಕೋರಿ ಸಂಸದ ಬಸವರಾಜ ಬೊಮ್ಮಾಯಿ ಅರ್ಜಿ ಸಲ್ಲಿಕೆ..!!!
ಬೆಂಗಳೂರು : ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ಸಿವಿಲ್ ಕೋರ್ಟಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ವಕೀಲ ಜಗದೀಶ ಮಹದೇವ್ ವಿರುದ್ಧವೂ ಕೂಡಾ ನಿರ್ಭಂದಕಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.ತಮ್ಮ ವಿರುದ್ಧ ಮಾನಿಹಾನಿಕಾರಕ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ದಾವೇ ಹೂಡಿದ್ದಾರೆ.ಬಸವರಾಜ್ ಬೊಮ್ಮಾಯಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಳೆ ಕೋಟ್೯ ಆದೇಶ ಪ್ರಕಟಿಸಲಿದೆ.
ಸಿಎಂ ವಿರುದ್ಧ ಮುಡಾ ಹಗರಣ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರಕಾರ ವಿಪಕ್ಷ ನಾಯಕರುಗಳ ಹಳೇ ಕೇಸ್ ರೀ ಓಪನ್ ಮಾಡುತ್ತಿದೆ.ಅಲ್ಲದೇ ಬಿಜೆಪಿ ಸರಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ.ಇದೆಲ್ಲದರ ಮದ್ಯೆ ಬಸವರಾಜ ಬೊಮ್ಮಾಯಿ ಕೊಟ್೯ ಮೊರೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಬೊಮ್ಮಾಯಿ ವಿರುದ್ಧ ಏನಾದರೂ ಆರೋಪ ಇದೆಯಾ.? ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ ಅಥವಾ ಇನ್ನೇನಾದರೂ ಬೇರೆ ಇದೆಯಾ ಎನ್ನುವ ಅನುಮಾನ ಮೂಡಿದೆ.