ನಿತ್ಯ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತಿದೆಯೇ? ಸಿಂಪಲ್ ಮನೆಮದ್ದು ಇಲ್ಲಿದೆ

Share to all

ಸಾಮಾನ್ಯವಾಗಿ ಹೆಚ್ಚಾಗಿ ಊಟ ಮಾಡಿದ ನಂತರ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಯೆಂದರೆ ಅದು ಹೊಟ್ಟೆ ಉಬ್ಬರ. ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ ಉತ್ಪಾದನೆ ಅಥವಾ ಜೀರ್ಣಾಂಗದ ಮಾಂಸ – ಖಂಡಗಳ ಅನಿಯಮಿತವಾದ ಚಲನೆ ಸಹಜವಾಗಿಯೇ ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.

ಈ ಸಮಸ್ಯೆ ಹೆಚ್ಚಾಯಿತೆಂದರೆ ಹೊಟ್ಟೆ ತೊಳಸಿದಂತಾಗಿ ವಾಕರಿಕೆ ಬರುವಂತಾಗುತ್ತದೆ. ಹೊಟ್ಟೆ ನೋವೂ ಸಹ ಬರಬಹುದು. ಇದರಿಂದ ದೇಹದ ಅಸ್ವಸ್ಥತೆ ಹೆಚ್ಚಾಗಿ, ನಮ್ಮ ಪ್ರತಿ ದಿನದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಸಮಸ್ಯೆ ಕ್ರಮೇಣ ವಾಗಿ ನಿವಾರಣೆಯಾಗುವುದು. ಇದು ಜೀರ್ಣಕ್ರಿಯೆ ರಸವನ್ನು ಉತ್ತೇಜಿಸುವುದು ಹಾಗೂ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು.ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಲಿಂಬೆಯನ್ನು ಹಿಂಡಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.ಲಿಂಬೆಯು ಜೀರ್ಣಕ್ರಿಯೆ ಉತ್ತೇಜಿಸುವುದು ಮತ್ತು ಸ್ವಲ್ಪ ಮೂತ್ರವರ್ಧಕವಾಗಿಯೂ ಕೆಲಸ ಮಾಡುವುದು. ದೇಹದಲ್ಲಿ ಇರುವ ಅತಿಯಾದ ಗ್ಯಾಸ್ ಮತ್ತು ವಿಷಕಾರಿ ಅಂಶವನ್ನು ಇದು ಹೊರಗೆ ಹಾಕಲು ಸಹಕಾರಿ ಆಗಿದೆ. ಜೀರ್ಣಕ್ರಿಯೆ ಕಾರ್ಯವು ಸರಾಗವಾಗಿ ಆಗಲು ಇದು ತುಂಬಾ ಪರಿಣಾಮಕಾರಿ ಆಗಿದೆ.

ಜೀರಿಗೆ ನೀರು:-

ಭಾರತೀಯರು ತಮ್ಮ ಪ್ರತಿಯೊಂದು ಅಡುಗೆಗೂ ಹೆಚ್ಚಾಗಿ ಬಳಸಲ್ಪಡುವಂತಹ ಜೀರಿಗೆಯು ಕೂಡ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗಿರುವುದು. ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನ್ನು ಕಡಿಮೆ ಮಾಡುವುದು.ಒಂದು ಚಮಚ ಜೀರಿಗೆಯನ್ನು ಸ್ವಲ್ಪ ಹುರಿದುಕೊಳ್ಳಿ. ಇದರ ಬಳಿಕ ಒಂದು ಕಪ್ ನೀರನ್ನು ಬಿಸಿ ಮಾಡಲು ಇಡಿ. ಹುರಿದು ಕೊಂಡು ಜೀರಿಗೆ ಹಾಕಿ ಮತ್ತು 5 ರಿಂದ 7 ನಿಮಿಷಗಳ ವರೆಗೆ ಕುದಿಸಿ. ಇದರ ಬಳಿಕ ಸೋಸಿಕೊಂಡು ಬಿಸಿ ಇರುವಾಗಲೇ ಅದನ್ನು ಕುಡಿಯಿರಿ. ಜೀರಿಗೆ ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ಪಾದಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಮಾಡಿ ಗ್ಯಾಸ್ ಸಮಸ್ಯೆಯನ್ನು ದೂರ ಮಾಡುವುದು.

ಶುಂಠಿ ಮತ್ತ ತುಳಸಿ ಪಾನೀಯ:-

ಶುಂಠಿ ಹಾಗೂ ತುಳಸಿಯು ಜೀರ್ಣಕ್ರಿಯೆಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ನಮಗೆ ತಿಳಿದೇ ಇದೆ. ಇವುಗಳನ್ನು ಜತೆಯಾಗಿ ಸೇವನೆ ಮಾಡಿದರೆ, ಆಗ ಇದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ದೂರ ಮಾಡಬಹುದು. ಸಣ್ಣ ತುಂಡು ಶುಂಠಿ ತೆಗೆದುಕೊಂಡು, ಇದನ್ನು ತೆಳುವಾಗಿ ಕತ್ತರಿಸಿಕೊಳ್ಳಿ.ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಈ ಶುಂಠಿ ತುಂಡುಗಳನ್ನು ಹಾಕಿ, ಅದೇ ರೀತಿ 5 ರಿಂದ 7 ತುಳಸಿ ಎಲೆಗಳನ್ನು ಕೂಡ ಹಾಕಿ. 10 ನಿಮಿಷ ಕಾಲ ಹಾಗೆ ಕುದಿಯಲಿ, ಇದರ ಬಳಿಕ ಸೋಸಿಕೊಂಡು, ಸ್ವಲ್ಪ ಬಿಸಿ ಇರುವಾಗಲೇ ಕುಡಿಯಿರಿ. ಶುಂಠಿಯು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಜೀರ್ಣಕ್ರಿಯೆ ಉತ್ತೇಜಿಸುವುದು. ಅದೇ ರೀತಿಯಲ್ಲಿ ತುಳಸಿಯು ಜೀರ್ಣಕ್ರಿಯೆ ವ್ಯವಸ್ಥೆಗೆ ಆರಾಮ ನೀಡುವುದು. ಇವೆರಡನ್ನು ಜತೆಯಾಗಿ ಮಿಶ್ರಣ ಮಾಡಿದರೆ, ಆಗ ಇದರಿಂದ ಗ್ಯಾಸ್ ನಿವಾರಣೆ ಆಗಿ, ಹೊ್ಟೆ ಉಬ್ಬರ ಹೆಚ್ಚಾಗುವುದು.

ಹಿಂಗು ನೀರು:-

ಜೀರ್ಣಕ್ರಿಯೆಗೆ ಸಹಕಾರಿ ಆಗಿರುವ ಹಿಂಗನ್ನು ಹೆಚ್ಚಾಗಿ ಸಸ್ಯಾ ಹಾರ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇದು ಕೂಡ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗಿದೆ. ಒಂದು ತುಂಡು ಹಿಂಗನ್ನು ಬಿಸಿ ನೀರಿಗೆ ಹಾಕಿ.ಇದನ್ನು ವಾರದಲ್ಲಿ ಎರಡು ಸಲ, ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು. ಹಿಂಗು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗಿದೆ. ಇದು ಸಂಪೂರ್ಣ ಜೀರ್ಣಕ್ರಿಯೆ ಸುಧಾರಣೆ ಮಾಡುವುದು.

ಮಜ್ಜಿಗೆ ಮತ್ತು ಶುಂಠಿ

ಮಜ್ಜಿಗೆಯು ಯಾವಾಗಲೂ ಜೀರ್ಣಕ್ರಿಯೆ ಸುಧಾರಣೆ ಮಾಡಲು ಸಹಕಾರಿ ಆಗಿರುವುದು. ಇದಕ್ಕೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಹಾಕಿದರೆ, ಆಗ ಇದು ಗ್ಯಾಸ್ ನಿವಾರಣೆ ಮಾಡಲು ಇನ್ನಷ್ಟು ಪರಿಣಾಮಕಾರಿ ಆಗಿರುವುದು.ಒಂದು ಕಪ್ ಮಜ್ಜಿಗೆಗೆ ಒಂದು ಚಮಚ ತುರಿದ ಶುಂಠಿ ಹಾಕಿ ಮತ್ತು ಒಂದು ಚಮಚ ಕೊತ್ತಂಬರಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಬೆಳಗ್ಗೆ ಅಥವಾ ಊಟವಾದ ಬಳಿಕ ಕುಡಿದರೆ ಒಳ್ಳೆಯದು. ಮಜ್ಜಿಗೆಯಲ್ಲಿ ಪ್ರೊಬಯೋಟಿಕ್ ಅಂಶವಿದ್ದು, ಇದು ಹೊಟ್ಟೆಯ ಆರೋಗ್ಯ ಕಾಪಾಡುವುದು. ಶುಂಠಿ ಮತ್ತು ಕೊತ್ತಂಬರಿಯು ಜೀರ್ಣಕ್ರಿಯೆ ಸುಧಾರಿಸಿ, ಉರಿಯೂತ ಕಡಿಮೆ ಮಾಡುವುದು. ಈ ಸಂಯೋಜನೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ಗ್ಯಾಸ್ ನಿವಾರಣೆ ಮಾಡುವುದು.

ಓಮಕಾಳು:-ಓಮಕಾಳಿನಲ್ಲಿ ಕೂಡ ಜೀರ್ಣಕ್ರಿಯೆ ಸುಧಾರಿಸುವ ಗುಣಗಳು ಇವೆ ಮತ್ತು ಗ್ಯಾಸ್ ನಿವಾರಣೆಗೆ ಇದು ಪರಿಣಾಮಕಾರಿ ಆಗಿದೆ. ಒಂದು ಚಮಚ ಓಮಕಾಳನ್ನು ರಾತ್ರಿ ವೇಳೆ ನೀರಿನಲ್ಲಿ ಹಾಕಿ ನೆನೆಸಿಡಿ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ದೂರವಾಗು ವುದು. ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಹೊಟ್ಟೆಯ ಆರೋಗ್ಯ ಕಾಪಾಡುವುದು.

ಸೋಂಪು ಕಾಳು: ಊಟವಾದ ಬಳಿಕ ಹೋಟೆಲ್ ನಲ್ಲಿ ನೀಡುವಂತಹ ಸೋಂಪನ್ನು ಜಗಿದರೆ, ಅದರಿಂದ ಜೀರ್ಣಕ್ರಿಯೆ ಉತ್ತಮವಾಗುವುದು. ಇದು ಕೂಡ ಗ್ಯಾಸ್ ನಿವಾರಣೆಗೆ ಪರಿಣಾಮಕಾರಿ ಆಗಿದೆ. ಒಂದು ಚಮಚ ಸೋಂಪನ್ನು ನಿಧಾಣವಾಗಿ ಜಗಿದು ತಿನ್ನಬೇಕು. ಸೋಂಪು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಿಸಿ, ಜೀರ್ಣಕ್ರಿಯೆ ಸ್ನಾಯುಗಳಿಗೆ ಆರಾಮ ನೀಡುವುದು

ಬೆಳಗ್ಗೆ ಪುದೀನಾ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದು ಅಜೀರ್ಣ ಸಮಸ್ಯೆಯನ್ನು ದೂರ ಮಾಡಲು ಸಹಕಾರಿ ಆಗಿದೆ. ಒಂದು ಕಪ್ ನೀರನ್ನು ಕುದಿಸಿ, ಅದಕ್ಕೆ ಕೆಲವು ಪುದೀನಾ ಎಲೆಗಳನ್ನು ಹಾಕಿ. 5-7 ನಿಮಿಷ ಕಾಲ ಹಾಗೆ ಕುದಿಸಿ ಮತ್ತು ಬಿಸಿ ಇರುವಾಗಲೇ ಕುಡಿಯಿರಿ. ಪುದೀನಾವು ಜೀರ್ಣಕ್ರಿಯೆ ಸ್ನಾಯುಗಳನ್ನು ಆರಾಮವಾಗಿಡುವುದು ಮತ್ತು ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಸಹಕಾರಿ ಆಗಿದೆ.

ಮೆಂತ್ಯೆ ನೀರು: ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಸಹಿತ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯೆ ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆಕಾಳನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಇದನ್ನು ಕುಡಿದರೆ ಆಗ ಇದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ದೂರವಾಗುವುದು.


Share to all

You May Also Like

More From Author