ಪಂಕ್ಚರ್ ಮಾಫಿಯಾಗೆ ಇಲ್ವಾ ಕಡಿವಾಣ!? 6 ತಿಂಗಳಲ್ಲಿ 482 BMTC ಬಸ್ʼಗಳ ಟೈರ್ ಪಂಕ್ಚರ್!

Share to all

ಬೆಂಗಳೂರು:– ಬಿಎಂಟಿಸಿಗೆ ಬೆಂಗಳೂರು ಪಂಕ್ಚರ್ ಮಾಫಿಯ ತಲೆನೋವಾಗಿ ಪರಿಣಮಿಸಿದ್ದು, 6 ತಿಂಗಳಲ್ಲಿ 482 ಬಿಎಂಟಿಸಿ ಬಸ್​ಗಳ ಟೈರ್ ಪಂಕ್ಚರ್ ಮಾಡಿರುವ ವರದಿ ಬಹಿರಂಗವಾಗಿದೆ. ಇದರಿಂದ ನಡು ರೋಡಲ್ಲಿ ಬಿಎಂಟಿಸಿ ಬಸ್​​ಗಳು ಪಂಕ್ಚರ್ ಆಗಿ ಕೈ ಕೊಡುತ್ತಿದ್ದು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪೋಲಿಸ್ ಕಮೀಷನರ್​ಗೆ ದೂರು ಕೊಡಲು ಮುಂದಾಗುತ್ತೇವೆ ಎಂದು ಬಿಎಂಟಿಸಿ ಅಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

ಬಿಎಂಟಿಸಿ ಬಸ್​​​ಗಳ ಪಂಕ್ಚರ್ ಲೆಕ್ಕಾಚಾರ
ಜನವರಿ- 92 ಬಸ್ಸುಗಳು
ಫೆಬ್ರವರಿ- 86 ಬಸ್ಸುಗಳು
ಮಾರ್ಚ್- 74 ಬಸ್ಸುಗಳು
ಏಪ್ರಿಲ್- 72 ಬಸ್ಸುಗಳು
ಮೇ- 82 ಬಸ್ಸುಗಳು
ಜೂನ್- 76 ಬಸ್ಸುಗಳು
ಒಟ್ಟು- 482 ಬಸ್ಸುಗಳ ಟೈರ್​ಗಳು ಪಂಕ್ಚರ್ ಆಗಿವೆ

ನಗರದ ಯಾವುದೇ ರೋಡ್, ಫ್ಲೈ ಓವರ್, ಅಂಡರ್ ಪಾಸ್​ಗಳಲ್ಲೂ ಕಬ್ಬಿಣದ ಮೊಳೆಗಳನ್ನು ಸುರಿಯಲಾಗುತ್ತಿದೆ. ಈ ಸಮಸ್ಯೆ ಬಿಎಂಟಿಸಿಗೆ ಮಾತ್ರವಲ್ಲದೆ ಬೈಕ್, ಕಾರುಗಳಿಗೂ ಇವೆ. ಎಲ್ಲೆಂದರಲ್ಲಿ ಕಬ್ಬಿಣದ ಮೊಳೆಗಳನ್ನು ಕಿರಾತಕರು ರಾತ್ರಿ ವೇಳೆಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತವೆ. ‌ನಂತರ ಅಕ್ಕಪಕ್ಕದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ವಾಹನ ಮಾಲೀಕರು ಹೋಗುತ್ತಾರೆ, ಆಗ ದುಪ್ಪಟ್ಟು ಹಣ ಪೀಕಿ ಪಂಕ್ಚರ್ ಹಾಕಿ ಕಳುಹಿಸುತ್ತಾರೆ. ಈ ಬಗ್ಗೆ ಬಿಎಂಟಿಸಿ ಪ್ರಯಾಣಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share to all

You May Also Like

More From Author