ಕೊರಿಯೋಗ್ರಾಫರ್ ಪತ್ನಿ ಮೇಲೆ ಅನುಮಾನ: ಪಾಪಿ ಗಂಡ ಮುಂದೆ ಏನ್ಮಾಡ್ದ ಗೊತ್ತಾ..?

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಗಂಡನಿಂದಲೇ ಸಿನಿಮಾ ಕೋರಿಯೋಗ್ರಾಫರ್​​ನ ಬರ್ಬರ ಕೊಲೆ ನಡೆದಿದೆ. ತೀರ್ಥಹಳ್ಳಿ ಮೂಲದವರಾದ ನವ್ಯಾ ಸಿನಿಮಾರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ನವ್ಯಾ ಹಾಗೂ ಕಿರಣ್ ಇಬ್ಬರು ಪ್ರೀತಿಸಿ ಕಳೆದ 3 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರಂತೆ.

ಪತಿ‌ ಕಿರಣ್​ಗೆ ಪತ್ನಿ ಶೀಲದ ಬಗ್ಗೆ ಅನುಮಾನ ಬಂದು ಗಲಾಟೆ ಮಾಡ್ತಿದ್ದ ಎಂಬ ಆರೋಪವಿತ್ತು. ಈ ಪರಿಣಾಮ ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ನವ್ಯಾಶ್ರೀ ಹಾಗೂ ಕಿರಣ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ಹೇಳಲಾಗಿದ್ದು, ಕೆಂಗೇರಿ ಉಪನಗರ, ಎಸ್.ಎಂ.ವಿ.ಲೇಔಟ್, 1 ನೇ ಬ್ಲಾಕ್ ನಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಸ್ನೇಹಿತೆಗೆ ಕರೆ ಮಾಡಿ‌ ಮನೆಗೆ ಬರುವಂತೆ ತಿಳಿಸಿದ್ದರಂತೆ ನವ್ಯಾ. ಈ ವೇಳೆ ತನಗೆ ಮನೆಯಲ್ಲೂ ನೆಮ್ಮದಿ ಇಲ್ಲ ಹೊರಗಡೆಯೂ ನೆಮ್ಮದಿ ಇಲ್ಲ ಅಂತ ಗೆಳತಿಗೆ ತಿಳಿಸಿದ್ದಳು.

ಆಕೆಯ ಸ್ನೇಹಿತೆ ಬಂದ ನಂತರ ನವ್ಯಾ ಆಕೆಯ ಇನೋರ್ವ ಗೆಳೆಯನಿಗೆ ಕರೆ ಮಾಡ್ತಾಳೆ. ತನಗೆ ಮನೆಯಲ್ಲಿ ಸೇಫ್​ ಫೀಲ್ ಆಗುತ್ತಿಲ್ಲ ಎಂದು ಆತನಿಗೆ ಭೇಟಿಯಾಗುವಂತೆ ಹೇಳಿದ್ಲಂತೆ. ಮೂವರು ಆರ್.ಆರ್ ನಗರಕ್ಕೆ ಕಾರಿನಲ್ಲಿ ಹೋಗಿ ಮೋಮೋಸ್ ತಿಂದಿದ್ದರು ಎಂದು ಹೇಳಲಾಗಿದೆ. ಆಗ ಗಂಡನ ಮೇಲೆ ಕಂಪ್ಲೆಂಟ್ ಕೊಡು ಅಂತ‌‌ ನವ್ಯಾಶ್ರೀ ಗೆಳೆಯ ಹೇಳಿದ್ನಂತೆ. ಗೆಳೆಯನ್ನ ಆತನ ಮನೆಗೆ ಡ್ರಾಪ್ ಮಾಡಿದ್ದ ನವ್ಯಶ್ರೀ ಮತ್ತು ಆಕೆಯ ಗೆಳತಿ ಮನೆಗೆ ರಾತ್ರಿ 11:30 ಗಂಟೆಗೆ ಬಂದಿದ್ದು, ನವ್ಯಶ್ರೀ ಮನೆಯಲ್ಲೆ ಆಕೆಯ ಗೆಳತಿ ಕೂಡ ರಾತ್ರಿ‌ ಉಳಿದುಕೊಂಡಿದ್ದಳು ಎನ್ನಲಾಗಿದೆ.

ರಾತ್ರಿ ಗಾಡನಿದ್ರೆಗೆ ಹೋಗಿದ್ದ ನವ್ಯಶ್ರಿಯ ಗೆಳತಿಗೆ ಬೆಳಿಗ್ಗೆ ಎಚ್ಚರವಾಗಿದ್ದು, ಬೆಳ್ಳಗ್ಗೆ 6:00 ಗಂಟೆಗೆ ತನ್ನ ಬಟ್ಟೆ ತೇವವಾಗಿದ್ದು, ಎಚ್ಚರವಾಗಿ ನೋಡಿದಾಗ ನವ್ಯಶ್ರೀ ಕತ್ತು ಕೊಯ್ದು ಕೊಲೆ ಮಾಡಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನವ್ಯಾಶ್ರಿ ಗೆಳತಿ ತಾನು ಭಯದಿಂದ ಕಿರುಚಿ, ಅಕ್ಕಪಕ್ಕದವರನ್ನ ಕರೆದಿದ್ದು, ಜೊತೆಗೆ ಪೊಲೀಸ್ ಕಂಟ್ರೋಲ್ ರೂಮ್ 100 ಗೆ ಕರೆಮಾಡಿ ಕೊಲೆಯಾದ ಬಗ್ಗೆ ತಿಳಿಸಿರುತ್ತಾರೆ ಎಂದು ಹೇಳಲಾಗಿದೆ. ಜೊತೆಗೆ ನವ್ಯಾಶ್ರೀಯ ಗಂಡ ಕಿರಣ್​ ಕೊಲೆ ಮಾಡಿರುತ್ತಾನೆಂದು ಗೆಳತಿ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ. ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.


Share to all

You May Also Like

More From Author