ಅಯ್ಯೋ ಎಂಥಾ ಕಾಲ ಗುರು: ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಮೇಲೆ ರೇಪ್ ಯತ್ನ!

Share to all

ಉಡುಪಿ:- ಮಣಿಪಾಲ ಪೊಲೀಸರು ತನಿಖೆ ಚುರುಕುಗೊಳಿಸಿ ರೈಲಿನಲ್ಲಿ ಯುವತಿಯ ಮಾನಭಂಗ ಯತ್ನ ನಡೆದಿದ್ದು ಮಾಹಿತಿ ಪಡೆದ 24 ಗಂಟೆಯಲ್ಲೇ ಅರೆಸ್ಟ್ ಮಾಡಿದ್ದಾರೆ. 22 ವರ್ಷದ ಮೊಹಮ್ಮದ್ ಶುರೈಮ್ ಬಂಧಿತ ಆರೋಪಿ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ರೈಲಿನಲ್ಲಿ ಯುವತಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ.

ಮಣಿಪಾಲದ ಯುವತಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು. ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಯುವಕನೋರ್ವ ಅಸಭ್ಯ ವರ್ತನೆ ತೋರಿದ್ದಾನೆ. ಇನ್ನೇನು ಉಡುಪಿ ಬರಲು ಅರ್ಧ ಗಂಟೆ ಇರುವಾಗ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆರೋಪಿ ಶುರೈಮ್ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತು ಉಡುಪಿ ರೈಲ್ವೆ ಪೊಲೀಸ್​ಗೆ ಯುವತಿ ಮಾಹಿತಿ ನೀಡಿದ್ದಾರೆ. ರೈಲ್ವೆ ಮದತ್ ಆ್ಯಪ್ ಮೂಲಕವೂ ದೂರು ನೀಡಿದ್ದಾರೆ.


Share to all

You May Also Like

More From Author