ಡ್ಯಾನ್ಸ್ ಕೊರಿಯೋಗ್ರಾಫರ್ ಕೊಲೆ ಕೇಸ್‌ʼಗೆ ಹೊಸ ಟ್ವಿಸ್ಟ್: ಮುದ್ದಾದ ಹೆಂಡತಿ ಮುಗಿಸಲು ಮನೆಯೊಳಗೆ ಅಡಗಿ ಕೂತಿದ್ದ!

Share to all

ಈ ಫೋಟೋದಲ್ಲಿ ಇರೋರು ನವ್ಯಾ ಹಾಗೂ ಕಿರಣ್.. ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ರು. ಕೆಂಗೇರಿ ಉಪನಗರದ ಎಸ್‌.ಎಂ.ವಿ ಲೇಔಟ್‌ನ 1ನೇ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು.ಮದುವೆಯಾದ ಹೊಸತರಲ್ಲಿ ಸುಖವಾಗಿ ಇಬ್ಬರು ಸಂಸಾರ ನಡೆಸ್ತಿದ್ದರು. ಪತ್ನಿಯ ಶೀಲಾದ ಬಗ್ಗೆ ಕಿರಣ್ ಗೆ ಸಂಶಯ ಶುರುವಾಗಿ, ಕಳೆದ‌ 6 ತಿಂಗಳಿಂದ ಪತಿ‌-ಪತ್ನಿ ನಡುವೆ ಜಗಳವಾಗಿತ್ತು. ಈ ವಿಚಾರ ಪೋಷಕರಿಗು ತಿಳಿಸಿದ್ದಳಂತೆ, ಈ ವೇಳೆ ಮನೆಗೆ‌ ಬಾ ಅಂತ ನವ್ಯಶ್ರೀ ಪೋಷಕರು ಕರೆದ್ರು,  ತಾನು ಕಿರಣ್ ಜೊತೆಯಲ್ಲಿ ‌ಇರುತ್ತೆನೆ‌ ಎಂದು‌ ಹೇಳಿದ್ಲಂತೆ, ಆದರೀಗ ಕಣ್ಣಾರೆ ಕಣ್ಮುಚ್ಚಿರುವ ಮಗಳ ಕಂಡು ಕುಟುಂಬಸ್ಥರು ಬಿಕ್ಕಳಿಸುತ್ತಿದ್ದಾರೆ.̤

ಹೀಗಿರುವಾಗ ಮೊನ್ನೆ‌ ನವ್ಯಶ್ರಿ ತನ್ನ ಸ್ನೆಹಿತೆ ಐಶ್ವರ್ಯಳನ್ನ ಸಂಜೆ ಮನೆಗೆ ಕರೆಸಿಕೊಂಡಿದ್ದಳು, ಇಬ್ಬರು ಹೊರಗಡೆ ಹೋಗಿ ಪಾರ್ಟಿ ಮಾಡಿದ್ದಾರೆ. ಆದರೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಿರಣ್ ಮನೆಗೆ ಬಂದಿದ್ದಾನೆ, ಪತ್ನಿಯಿಲ್ಲದನ್ನ ನೋಡಿ ದೇವರ ಕೊಣೆಯಲ್ಲಿ ಅವಿತುಕೂತಿದ್ದನಂತೆ. ರಾತ್ರಿ ಹನ್ನೊಂದು ಮೂವತ್ತರ ಸುಮಾರಿಗೆ ಇಬ್ಬರು ಮನೆ ಗೆಳತಿ ಐಶ್ವರ್ಯ‌ ಹೋಗಿ ಮಲಗಿದ್ರೆ, ನವ್ಯಶ್ರೀ ಹೊರಗೆ ಬಂದು ಗೆಳೆಯನೊಬ್ಬಳ ಜೊತೆ ವಿಡಿಯೋ ಚಾಟಿಂಗ್ ಮಾಡ್ತಿದ್ಲಂತೆ. ಅದನ್ನ ನೋಡಿ ಪತಿ ಕಿರಣ್ ಕಿರಿಕ್ ಶುರುಮಾಡಿದ್ದಾನೆ.‌ಇಬ್ಬರ ನಡುವೆ ಗಲಾಟೆಯಾಗಿದೆ, ಅದೇ ಗಲಾಟೆಯಲ್ಲಿ ಚಾಕುವಿನಿಂದ ಪತ್ನಿ ಕತ್ತು ಸೀಳಿ‌‌ ಕೊಂದೆ ಬಿಟ್ಟಿದ್ದಾನೆ.

ಪತ್ನಿ ಪ್ರಾಣ ಹೋಗ್ತಿದ್ದಂತೆ ಆತ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಬದುಕಬೇಕು ಅಂತ ಆಸ್ಪತ್ರೆ ಸೇರಿದ್ದ. ನವ್ಯಶ್ರೀ ಸ್ನೇಹಿತಿ ಬೆಳಿಗ್ಗೆ ಎದ್ದು ಬರ್ಬರ ಹತ್ಯೆ ಕಂಡು ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾಳೆ.  ಆರೋಪಿ ಕಿರಣ್ ಬಂಧಿಸಿ ವಿಚಾರಣೆ ಮಾಡಿದಾಗ ನಾನೇ ಕೊಂದಿದ್ದು ಅಂತ ತಪ್ಪೊಪ್ಪಿಕೊಂಡಿದ್ದಾನೆ.‌ ಒಟ್ನಲ್ಲಿ..ಗಂಡ ಹೆಂಡತಿ ಏನೇ ಜಗಳ ಇದ್ರೂ ಅದನ್ನು ಬಗೆಹರಿಸಿಕೊಂಡು ಜೀವನ ಮಾಡ್ಬೇಕು. ಆದ್ರೆ ಗಂಡನಿಗೆ ಹೆಂಡ್ತಿಯ ಮೇಲಿನ ಸಂಶಯ ಅನ್ನೋ ಭೂತ ತಲೆಗೆ ಹೊಕ್ಕು ಆಕೆಯ ಜೀವನನ್ನೇ ಬಲಿಪಡೆದಿದೆ.


Share to all

You May Also Like

More From Author