ಈ ಊರಲ್ಲೋಂದು ವಿಚಿತ್ರ ಘಟನೆ: ಮೂರು ದಿನದ ಬಳಿಕ ಬಾವಿ ನೋಡಿದವರಿಗೆ ಕಾದಿತ್ತು ಅಚ್ಚರಿ!

Share to all

ಗದಗ: ಆ ಒಂದು ಊರಲ್ಲಿ ನಡೆದ ಆ ವಿಚಿತ್ರ ಘಟನೆಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಘಟನೆ ನಡೆದ ಮೂರು ದಿನದ ಬಳಿಕ ಬಾವಿಯಲ್ಲಿ ಕಂಡದ್ದನ್ನು ನೋಡಿ ಅಕ್ಷರಶಃ ಜನತೆ ಬೆಚ್ಚಿ ಬಿದ್ದರು. ಹಾಗಿದ್ರೆ ಬಾವಿಯಲ್ಲಿ ಕಂಡಿದ್ದೇನು!?, ಗ್ರಾಮಸ್ಥರು ಭಯ ಪಟ್ಟಿದ್ಯಾಕೆ!? ಎಂಬೆಲ್ಲಾ ವಿಚಾರ ಇಲ್ಲಿದೆ ನೋಡಿ!

ಹೌದು, ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆಯಾಗಿರುವ ವಿಚಿತ್ರ ಘಟನೆ ಜರುಗಿದೆ. ಈ ಮಹಿಳೆ ಮೂರು ದಿನ ಬಾವಿಯಲ್ಲಿದ್ದು, ಬದುಕಿದ್ದೇ ಪವಾಡ ಎನ್ನಲಾಗಿದೆ. ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದ್ದು, ಘಟನೆ ಬಳಿಕ ಅಲ್ಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಮಹಿಳೆ ಪತ್ತೆಯಾಗಿದ್ದಾಳೆ. ಸದ್ಯ ಮಹಿಳೆಯು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ  ಮಹಿಳೆಯನ್ನು  ಬಾವಿಗೆ ಬಿಸಾಡಿದ್ದು ಮತ್ತೋರ್ವ ಅಪರಿಚಿತ ಮಹಿಳೆ ಎನ್ನಲಾಗಿದೆ. ಅಲ್ಲದೇ ಆ ಅಪರಿಚಿತೆ ಮಹಿಳೆ ಯಾರು ಅನ್ನೋದೆ ಭಯಾನಕವಾಗಿದೆ.

ಆರು ತಿಂಗಳ ಹಿಂದಷ್ಟೇ ಈ ಮಹಿಳೆ ಮದುವೆಯಾಗಿದ್ದರು. ಆಗಸ್ಟ್‌ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ  ಕೆಲಸ ಮಾಡುತ್ತಿದ್ದಲು. ಅಲ್ಲಿಗೆ ಬಂದ ಸೀರೆಯುಟ್ಟುಕೊಂಡ ಅಪರಿಚಿತ ಮಹಿಳೆಯು, ಕುತ್ತಿಗೆ ಭಾಗಕ್ಕೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ.

ಕೈ ಬಳೆ, ಕಾಲುಂಗರ ನೀಡುವಂತೆ  ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಾಳೆ. ಕಣ್ಣು ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು  ಮಹಿಳೆ ಭಯಪಡಿಸಿದ್ದಾಳೆ. ಗೋವಿನ ಜೋಳದ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋದಲು ಎಂದು ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಹೇಳಿದ್ದಾರೆ.

ಅಲ್ಲದೇ ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದರು. ಬಾವಿಗೆ ಬಿದ್ದ ಮಾರನೆ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರು ಸಹಾಯಕ್ಕೆ ಯಾರು ಬರಲಿಲ್ಲ. ಆ. 22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ. ಆದರೆ ಯಾರು ನನಗೆ ಎಳೆದುಕೊಂಡು ಹೋದರು ಎನ್ನುವ ನಿಖರ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಇದೊಂದು ವಿಚಿತ್ರ ರೀತಿಯ ಘಟನೆಯಾಗಿದ್ದು, ಸದ್ಯ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


Share to all

You May Also Like

More From Author