ಅತ್ತಿಬೆಲೆ ಪಟಾಕಿ ದುರಂತ ಏರುತ್ತಲೆ ಇದೆ ಮೃತರ ಸಂಖ್ಯೆ – ಏರಿಕೆಯಾಗುತ್ತಲೆ ಇದೆ ಮೃತರ ಸಂಖ್ಯೆ ಈವರೆಗೆ ಸಾವಿಗೀಡಾದವರು
ಬೆಂಗಳೂರು –
ಬೆಂಗಳೂರಿನ ಅತ್ತಿಬೆಲೆ ಪಟಾಕಿ ಅಗ್ನಿ ದುರಂತ ಪ್ರಕರಣ ಕುರಿತಂತೆ ಮೃತರ ಸಂಖ್ಯೆ ಹೆಚ್ಚಾಗುತ್ತಿದೆ.ಹೌದು ಇಂದು ಮತ್ತೊರ್ವ ಚಿಕಿತ್ಸೆ ಫಲಿಸದೇ ಮೃತನಾಗಿದ್ದು ಹೀಗಾಗಿ ಘಟನೆಯಲ್ಲಿ ಮೃತರ ಸಂಖ್ಯೆ 17 ಕ್ಕೆ ಏರಿಕೆಯಾದಂತಾಗಿದೆ. ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ರಾಜೇಶ್ ಎನ್ನುವ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಇದರೊಂದಿಗೆ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದ್ದು ಇದೇ ಅಕ್ಟೋಬರ್ 07 ರಂದು ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಪರಿಣಾಮ ಅಂದೇ 15 ಜನ ಸಜೀವ ದಹನವಾಗಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಈಗಾಗಲೇ ವೆಂಕಟೇಶ್ ಮೃತಪಟ್ಟಿದ್ದು ಮತ್ತೆ ಇನ್ನೋರ್ವ ಯುವಕ ರಾಜೇಶ್ ಸಾವನ್ನಪ್ಪಿದ್ದಾನೆ.ಈ ಮೂಲಕ ಗಾಯಗೊಂಡವರಲ್ಲಿ ಇಬ್ಬರು ಮೃತಪಟ್ಟಿದ್ದು ಇನ್ನೋರ್ವ ಗಾಯಾಳು ಅಂಗಡಿ ಮಾಲೀಕ ನವೀನ್ ಚಿಕಿತ್ಸೆ ಪಡೆಯುತ್ತಿದ್ದಾರೆ.ಇತ್ತ ಈ ಒಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು ತನಿಖೆ ಚುರುಕುಗೊಂಡಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಉದಯ ವಾರ್ತೆ ಬೆಂಗಳೂರು…..