ಚಕ್ಕಡಿ ದಾರಿ” ಹಗರಣ: ಕೋಟಿ ಕೋಟಿ ಲೂಟಿಯ ಸತ್ಯ ಹೊರಬರಲಿ.ಡಿಸಿಗೆ ಮನವಿ ಸಲ್ಲಿಸಿದ ಮಾಜಿ ಸಚಿವ ಶಂಕರಪಾಟೀಲ..

Share to all

“ಚಕ್ಕಡಿ ದಾರಿ” ಹಗರಣ: ಕೋಟಿ ಕೋಟಿ ಲೂಟಿಯ ಸತ್ಯ ಹೊರಬರಲಿ.ಡಿಸಿಗೆ ಮನವಿ ಸಲ್ಲಿಸಿದ ಮಾಜಿ ಸಚಿವ ಶಂಕರಪಾಟೀಲ..

ಧಾರವಾಡ: ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ದಾರಿಯ ನೆಪದಲ್ಲಿ ಸರಕಾರಿ ಸ್ವಾಮ್ಯದ ಗುಡ್ಡ ಮತ್ತು ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಮಾಜಿ ಸಚಿವ. ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದ್ದಾರೆ.

ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಹಾಗೂ ನೀರಾವರಿ ಇಲಾಖೆಯ ಮಣ್ಣು ತೆಗೆದಿರುವ ಬಗ್ಗೆ ದಾಖಲೆಗಳ ಸಮೇತ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ವಿವರಿಸಿ, ಸಭೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನವಲಗುಂದ ಪಾರಂಪರಿಕ ಗುಡ್ಡದ ಮಣ್ಣನ್ನ ಯಾವ ಕಾನೂನಡಿ ತೆಗೆಯಲಾಗಿದೆ. ನೂರು ಕೋಟಿ ರೂಪಾಯಿಗಳ ಕಾಮಗಾರಿ ಪರವಾನಿಗೆ ಇಲ್ಲದೇ ಮಾಡಲು ಯಾರು ಪರವಾನಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಈಗಾಗಲೇ ತೆಗೆದಿರುವ ಕೋಟ್ಯಾಂತರ ರೂಪಾಯಿಗಳನ್ನ ಯಾರ ಹೆಸರಿನಲ್ಲಿ ತೆಗೆಯಲಾಗಿದೆ ಎಂಬುದನ್ನ ಬಹಿರಂಗ ಮಾಡಬೇಕು.

ನವಲಗುಂದ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಸಲು ತಮ್ಮಿಂದ ಯಾವುದೇ ತೊಂದರೆ ಆಗದು. ಆದರೆ, ಮಾಡುವ ಕೆಲಸಗಳು ಪಾರದರ್ಶಕವಾಗಿ ಇರಬೇಕು. ಯಾವುದೇ ಸರಕಾರವೂ ಹೀಗೆ ಮಾಡಲು ಪರವಾನಿಗೆ ಕೊಡಲು ಆಗುವುದಿಲ್ಲ.

ನವಲಗುಂದ ಕ್ಷೇತ್ರದಲ್ಲಿ ಆಗಿರುವ ಹಗರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಶರಣಪ್ಪಗೌಡ ದಾನಪ್ಪಗೌಡರ, ಮೃತ್ಯುಂಜಯ ಹಿರೇಮಠ, ಸಿದ್ಧಣ್ಣ ಕಿಟಗೇರಿ, ಅಡಿವೆಪ್ಪ ಮನಮಿ,ರೋಹಿತ ಮತ್ತಹಳ್ಳಿ,ಪುರಸಭೆ ಸದಸ್ಯರು ಮಹಾಂತೇಶ ಕಲಾಲ, ಶರಣಪ್ಪ ಹಕ್ಕರಕಿ,ಬಸವಾರಜ ಕಟ್ಟಿಮನಿ,ಜ್ಯೋತಿ ಗೊಲ್ಲರ,ಸುಮಂಗಲಾ ಬೇಂಡಿಗೇರಿ,ವಿಜಯಲಕ್ಷ್ಮೀ ಕಲಾಲ,ಸಂತೋಷ ನಾವಳ್ಳಿ,ವಿನಾಯಕ ದಾಡಿಬಾವಿ,ನಾಗೇಶ ಬೆಂಡಿಗೇರಿ,ಬಸವರಾಜ ಕಾತರಕಿ,ಮಲ್ಲಿಕಾರ್ಜುನ ಗುಂಡಗೋವಿ,ಜಯಪ್ರಕಾಶ ಬಾದಾಮಿ,ಸೇರಿದಂತೆ ಪುರಸಭೆಯ ಬಿಜೆಪಿ ಸದಸ್ಯರು ಹಾಜರಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author