ಶಿವಮೊಗ್ಗ:- ಲವ್ ಮಾಡೋಕೆ ಹುಡುಗಿ ಇಲ್ಲ, ನನ್ನ ಜೀವನ ಒಂಥರ ಉಪ್ಪಿನಕಾಯಿ ಇಲ್ಲ ಊಟದಂತಾಗಿದೆ ಹೀಗಾಗಿ ನಾನು ಸಾಯುತ್ತಿದ್ದೇನೆ ಎಂದು ಯುವಕ ನಾಪತ್ತೆ ಆಗಿದ್ದಾನೆ. ಈತನ ಹೆಸರು ಜಯದೀಪ್ ಅಂತ. ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗ. ಅಂಥಾ ವಯಸ್ಸೇನು ಆಗಿಲ್ಲ. 24 ವರ್ಷ ಅಷ್ಟೆ. ಆದ್ರೆ ಈ ವಯಸ್ಸಿಗೆ ಇವನಿಗೆ ಜೀವನವೇ ಬೇಡ ಅನಿಸಿದೆ. ಹಾಗಂತ ಅದಕ್ಕೆ ಸ್ಟ್ರಾಂಗ್ ಕಾರಣ ಏನೂ ಇಲ್ಲ. ಈ ಸಿಂಗಲ್ ಸುಂದರನಿಗೆ ಪ್ರೀತಿ ಮಾಡೋದಕ್ಕೆ ಹುಡುಗಿ ಸಿಕ್ಕಿಲ್ಲವಂತೆ. ಅದಕ್ಕೆ ಈ ಯುವಕ ವಾಟ್ಸಪ್ನಲ್ಲಿ ಸ್ಟೇಟಸ್ ಒಂದನ್ನ ಹಾಕಿ ನಾಪತ್ತೆಯಾಗಿದ್ದಾನೆ.
ನಾನು ಬದುಕಿದಿದ್ರೆ ಸ್ವಲ್ಪ ದಿನಗಳಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಬ್ಬ ಒಳ್ಳೆ ವಿದ್ಯಾರ್ಥಿ ಈ ಸಲ ಱಂಕ್ ಬರುವ ಚಾನ್ಸ್ ಇತ್ತು. ಆದ್ರೆ ಅದು ಇನ್ನೂ ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನ ಕ್ಷಮಿಸಿಬಿಡಿ. ನಿಮ್ಮ ಆಸೆ ನಂಬಿಕೆ ಎಲ್ಲ ನಾನು ಹಾಳು ಮಾಡ್ತಿದ್ದೀನಿ ಅಂತ ಬೇಜಾರು ಆಗ್ಬೇಡಿ. ನನ್ನ ಸಾಲ ನಿಮ್ಮ ಮೇಲೆ ಹಾಕಿ ಹೋಗ್ತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಎಲ್ಲರಿಗೂ ಸಾಲ ವಾಪಸ್ ಕೊಡಿ. ನನ್ನ ಜೀವನವೇ ಒಂದು ರೀತಿ ಉಪ್ಪಿಲ್ಲದ ಊಟದ ತರಹ ಆಗಿದೆ. ಈ ರೀತಿ ಸುಮಾರು 3 ವರ್ಷದಿಂದ ಆಗಿದೆ. ಜೀವನದಲ್ಲಿ 24 ವಯಸ್ಸಾಗಿದ್ರೂ, ಒಂದು ಹುಡುಗಿ ಅಂತ ಇಲ್ಲ. ಸಣ್ಣ ಸಣ್ಣ ಹುಡುಗರಿಗೆ ಲವ್ವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು. ಒನ್ ಸೈಡ್ನಲ್ಲಿ ನಾನು ಒಬ್ಬಳನ್ನ ಲವ್ ಮಾಡ್ದೆ, ಅವಳು ಒಪ್ಪಿಲ್ಲ.
ಒಳ್ಳೆ ಕೆಲಸ ಹುಡುಕೋದ್ರಲ್ಲೂ ವಿಫಲನಾದೆ ಇತ್ತಿಚೀನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರು ದೂರ ಹೋಗುವಂತೆ ಪ್ರೇರೆಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ, ಊರು ಬಿಡೋದಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ ಸಾರಿ ಪ್ಲೀಸ್ ದಯವಿಟ್ಟು ಕ್ಷಮಿಸಿಬಿಡಿ. ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಎಂದಿದ್ದಾನೆ.