ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದ ಆರ್ಟಿಐ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಲಾಗುತ್ತದ್ದು, ಓರ್ವ ಗನ್ ಮ್ಯಾನ್ ನೀಡುವಂತೆ ಗಂಗರಾಜು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಗಂಗರಾಜು ಅವರಿಗೆ ಗನ್ ಮ್ಯಾನ್ ನೀಡಲು ನಿರಾಕರಿಸಿದ್ದು, ಗಂಗರಾಜು ಮನೆಯ ಬಳಿ ನಿರಂತರವಾಗಿ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಗಂಗರಾಜು ಮನೆಯ ಬಳಿ ಬೀಟ್ ಸಹಿ ಪುಸ್ತಕ ಇಡಲಾಗಿದೆ. ಅಲ್ಲದೇ, ಜೀವಹಾನಿ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಿ. ಒಂದು ವೇಳೆ ನಿಮ್ಮ ಕುಟುಂಬ ಹಾಗೂ ನಿಮಗೆ ಭದ್ರತೆ ಬೇಕಿದ್ದರೇ, ನಿಯಮಾನುಸಾರ ಹಣ ಪಾವತಿಸಿ ಗನ್ ಮ್ಯಾನ್ ಪಡೆಯಿರಿ ಎಂದು ಪೊಲೀಸರು ಗಂಗರಾಜು ಅವರಿಗೆ ಹಿಂಬರಹ ನೀಡಿದ್ದಾರೆ.
ಇನ್ನೂ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಅಲ್ಲದೇ, ಇವರನ್ನು ಕೂಡಲೇ ಬಂಧಿಸಬೇಕೆಂದು ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿತ್ತು.