ಛೇ ಇವರೆಂಥಾ ನೀಚರು: ಹಸುವಿನ ಮೇಲೆ ಆ್ಯಸಿಡ್, ಕಾದ ಎಣ್ಣೆ ಸುರಿದ ದುಷ್ಕರ್ಮಿಗಳು!

Share to all

ಕೋಲಾರ – ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಕಿಡಿಗೇಡಿಗಳು ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ. ಇದರಿಂದ, ಹಸುವಿನ ಮೇಲಿನ ಚರ್ಮ ಸುಲಿದಿದೆ. ರಸ್ತೆ ತುಂಬೆಲ್ಲ ರಕ್ತ ಹರಡಿದೆ. ಹಸು ರೋದಿಸಿದ್ದು, ಮೂಕ ಪ್ರಾಣಿಯ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಬಳಿಕ ಹಸು ಕಾಣೆಯಾಗಿದೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಭಜರಂಗದಳ ಕಾರ್ಯಕರ್ತರು ಗಲ್​​ಪೇಟೆ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಗಾಯಗೊಂಡ ಹಸುವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಬೀಡಾಡಿ ಹಸುವಿನ ಮೇಲೆ ಆ್ಯಸಿಡ್ ಹಾಗೂ ಕಾದಿರುವ ಎಣ್ಣೆ ಸುರಿದು ಗಾಯಗೊಳಿಸಿ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಗೊಂಡು ನರಳಾಡುತ್ತಿರುವ ಹಸುಗಳನ್ನು ಕಂಡು ಸ್ಥಳೀಯರು ಮರುಗಿದರು. ಹಸುಗಳನ್ನು ಈ ರೀತಿ ಚಿತ್ರಹಿಂಸೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


Share to all

You May Also Like

More From Author