ಉದಯ ವಾರ್ತೆ ಇಂಪ್ಯಾಕ್ಟ್. ಅಂಜನಾ ಪಟೇಲ್ ಸೇವಾ ಸಮಾಜಕ್ಕೆ ಎಚ್ಚರಿಕೆ..ಪಾಲಿಕೆ ಆಸ್ತಿ ಕಬಳಿಸಿದರೆ FIR ದಾಖಲಿಸುವ ವಾರ್ನಿಂಗ್..

Share to all

ಉದಯ ವಾರ್ತೆ ಇಂಪ್ಯಾಕ್ಟ್. ಅಂಜನಾ ಪಟೇಲ್ ಸೇವಾ ಸಮಾಜಕ್ಕೆ ಎಚ್ಚರಿಕೆ..ಪಾಲಿಕೆ ಆಸ್ತಿ ಕಬಳಿಸಿದರೆ FIR ದಾಖಲಿಸುವ ವಾರ್ನಿಂಗ್..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿ ಕಬಳಿಸಿದರಾ ಅಂಜನಾ ಪಟೇಲ್ ಸೇವಾ ಸಮಾಜ ಕಣ್ಣಿದ್ದು ಕುರುಡರಾದರಾ ಪಾಲಿಕೆಯ ಅಧಿಕಾರಿಗಳು ಕಂಡ ಕಂಡವರ ಪಾಲಾಗುತ್ತಿವೆ ಪಾಲಿಕೆಯ ಆಸ್ತಿ ಅಂತಾ ಕಳೆದ ಶನಿವಾರ ಉದಯ ವಾರ್ತೆ ಸುದ್ದಿ ಪ್ರಸಾರ ಮಾಡಿತ್ತು..

ಉದಯ ವಾರ್ತೆ ವರದಿಗೆ ಸ್ಫಂದಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೋನ್ ಏಳರ ವಲಯ ಆಯುಕ್ತರಾದ ಮಾಲಿಪಾಟೀಲ ಅವರ ಸ್ಥಳಕ್ಕೆ ಹೋಗಿ ಪಾಲಿಕೆಯ ಆಸ್ತಿಯನ್ನು ಉಳಿಸಲು ಅಂಜನಾ ಪಟೇಲ್ ಸೇವಾ ಸಮಾಜ ಉದ್ಯಾನವನಕ್ಕೆ ಹಾಕಿದ ಗೇಟಿಗೆ ಕೀಲಿ ಜಡಿದು ಬಂದಿದ್ದಾರೆ.

ಅಲ್ಲದೇ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯಲ್ಲಿ ಅತೀಕ್ರಮಣ ಮತ್ತು ಕೀಲಿ ತೆಗೆದರೆ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ..

!!!!!!!ಏನಿದು ಪ್ರಕರಣ !!!!!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ವ್ಯಾಪಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಮಾರವಾಡಿಗಳು ಈಗ ಪಾಲಿಕೆಯ ಆಸ್ತಿ ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಲ್ಲಿಯ ಆಸ್ತಿಯನ್ನ ಮಾರವಾಡಿಗಳು ಕಬಳಿಸಿದ್ದಾರೆ ಅಂತೀರಾ..ಮಾರವಾಡಿಗಳು ಸೇರಿಕೊಂಡು ಅಂಜನಾ ಪಟೇಲ ಸೇವಾ ಸಮಾಜ ಅಂತಾ ಒಂದು ಸಂಘ ಕಟ್ಟಿಕೊಂಡು ಅದಕ್ಕೊಂದು ಗೋಕುಲ್ ರಸ್ತೆಯ ಕೋಟಿಲಿಂಗೇಶ್ವರ ನಗರದ ಸಿಟಿಎಸ್ ನಂ 4918 ರಲ್ಲಿ ಸಮುದಾಯ ಭವನ ಕಟ್ಟಿಕೊಂಡಿದ್ದಾರೆ.ಆ ಸಮುದಾಯ ಭವನಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉದ್ಯಾನವನಕ್ಕೆ ಮೀಸಲಿಟ್ಟ ಸಿಟಿಎಸ್ ನಂಬರ 4917/ಬ ಪ್ಲಾಟ್ ನಂಬರ 43 ಎ ಜಾಗೆಯನ್ನ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸುಮಾರು ಹತ್ತು ವರ್ಷಗಳಿಂದ ಉದ್ಯಾನವನ್ನು ಕಬಳಿಸಿಕೊಂಡು ಅದಕ್ಕೊಂದು ಕಂಪೌಂಡ ಹಾಕಿಕೊಂಡು ಜೊತೆಗೆ ಅದಕ್ಕೊಂದು ಗೇಟು
ಹಾಕಿಕೊಂಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author