ದಶಕಗಳ ಕಾಲ ಪಾಲಿಕೆಯ ಆಸ್ತಿ ಬಳಕೆ…ಅಂಜನಾ ಪಟೇಲ್ ಸೇವಾ ಸಮಾಜದ ಮೇಲೆ ಕ್ರಮ ಇಲ್ವಾ ಗೌಡ್ರೇ..ಹಿಂಗಾದರೆ ಹೆಂಗೆ ಸಾಹೇಬ್ರೇ..
ಹುಬ್ಬಳ್ಳಿ:- ಹುಬ್ಬಳ್ಳಿಯ ಗೋಕುಲ ರಸ್ತೆಯ ಕೋಟಿಲಿಂಗೇಶ್ವರ ನಗರದಲ್ಲಿರುವ ಅಂಜನಾ ಪಟೇಲ ಸೇವಾ ಸಮಾಜ ಕಳೆದ ಒಂದು ದಶಕಗಳ ಕಾಲ ಪಾಲಿಕೆಯ ಆಸ್ತಿಯನ್ನ ತಮ್ಮದೇ ಎಂದು ಬಳಸಿಕೊಳ್ಳುತ್ತಿರುವುದನ್ನ ಪಾಲಿಕೆಯ ಅಧಿಕಾರಿಗಳು ಪತ್ತೇ ಹಚ್ಚಿದ್ದಾರೆ.ಹಾಗೂ ಪಾಲಿಕೆಯ ಆಸ್ತಿಗೆ ಗೇಟ್ ಹಾಕಿ ಕೀಲಿಯನ್ನು ಜಡದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಯನ್ನ ಬಳಸಿಕೊಳ್ಳಬೇಕಾದರೆ ಅದಕ್ಕೆ ಬಾಡಿಗೆ ಕಟ್ಟ ಬೇಕಾಗುತ್ತೇ ಜೊತೆಗೆ ಪಾಲಿಕೆಯ ನಿಯಮಗಳು ಉಂಟು.ಆದರೆ ಈ ಅಂಜನಾ ಪಟೇಲ್ ಸೇವಾ ಸಮಾಜಕ್ಕೆ ಅದ್ಯಾವುದೂ ಅನ್ವಯಿಸುವುದಿಲ್ಲಾ ಅಂತಾ ಕಾಣುತ್ತೇ.
ಪಾಲಿಕೆಯ ಆಸ್ತಿಯನ್ನ ಬಳಸಿಕೊಂಡಿದ್ದು ಗೊತ್ತಾದ ಮೇಲೂ ಪಾಲಿಕೆಯ ಅಧಿಕಾರಿಗಳು ಅವರಿಗೆ ಒಂದು ನೋಟೀಸ್ ಇಲ್ಲಾ.ಒಂದು ಕ್ರಮ ಇಲ್ಲಾ.ಹಾಗಿದ್ದರೆ ಪಾಲಿಕೆಯ ಆಸ್ತಿಯನ್ನ ಕದ್ದು ಮುಚ್ಚಿ ಬಳಸಿಕೊಳ್ಳುವವರಿಗೆ ನೀವು ಏನು ಸಂದೇಶ ಕೊಡತೀರಿ ಸಾಹೇಬ್ರೇ.
ಈಗಲಾದರೂ ಪಾಲಿಕೆಯ ಆಸ್ತಿ ಬಳಸಿದ ಆರೋಪದ ಮೇಲೆ ಆ ಸೇವಾ ಸಮಾಜದ ಮೇಲೆ ದೂರು ದಾಖಲು ಮಾಡಿ ಬಡ್ಡಿ ಸಮೇತ ಬಾಡಗಿ ವಸೂಲಿ ಮಾಡಿದರೆ ಮಾತ್ರ ಪಾಲಿಕೆಯ ಆಸ್ತಿ ಅತೀಕ್ರಮಣ ಮಾಡುವವರಿಗೆ ಒಂದು ಸಂದೇಶ ಕೊಟ್ಟಂತಾಗಬಹುದು ಎಂಬುದು ಉದಯ ವಾರ್ತೆಯ ಕಳಕಳಿ.