ರೇಣುಕಾ ಸ್ವಾಮಿ ಬರ್ಬರ ಹತ್ಯೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಈ ಘಟನೆ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಬುಧವಾರ ದೋಷಾರೋಪ ಪಟ್ಟಿ ಕೋರ್ಟ್ ಕೈ ಸೇರಲಿದೆ. ಜೈಲಿನೊಳಗೆ ಖೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ಕೂಡ ಬೆಳಕಿಗೆ ಬಂತು. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಅದೇಶಿಸಲಾಗಿದೆ. ಈಗ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ರೆಡಿ ಆಗಿದ್ದಾರೆ.
ಅರೋಪಗಳು ಸಾಬೀತಾದ್ರೆ ಕನ್ನಡದ ಸ್ಟಾರ್ ನಟ ದರ್ಶನ್ಗೆ ಜೈಲೇ ಗತಿಯಾಗುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ನಟ ದರ್ಶನ್ ಅಪರಾಧಿಯಾಗಿ ಜೈಲು ಸೇರಿದ್ರೆ. ಕಾಟೇರ ಸಿನಿಮಾ ಬಳಿಕ ದರ್ಶನ್ ಒಪ್ಪಿಕೊಂಡ ಮುಂದಿನ ಚಿತ್ರಗಳ ಕಥೆ ಏನು? ಎಂಬ ಪ್ರಶ್ನೆ ಮೂಡುತ್ತಿದೆ.
ನಿರ್ದೇಶಕ ಮಿಲನಾ ಪ್ರಕಾಶ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧದಷ್ಟು ಮುಗಿದೆ ಎನ್ನಲಾಗ್ತಿದೆ. ಡೆವಿಲ್ ಶೂಟಿಂಗ್ ಗಾಗಿ ಮೈಸೂರಿಗೆ ತೆರಳಿದ್ದ ನಟ ದರ್ಶನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿ ಕರೆತಂದಿದ್ರು. ದರ್ಶನ್ ಜೈಲು ಸೇರಿದ್ರೆ ಡೆವಿಲ್ ಕಥೆಯೇನು ಎನ್ನುವ ಚಿಂತೆಯಲ್ಲಿ ಮಿಲನಾ ಪ್ರಕಾಶ್ ಮುಳುಗಿದ್ದಾರೆ. ಚಾರ್ಜ್ ಶೀಟ್ ಆತಂಕದಲ್ಲಿರುವ ಡೆವಿಲ್ ಡೈರೆಕ್ಟರ್ ಇದ್ದು, ಈ ಸಿನಿಮಾ ನಿರ್ಮಾಪಕರು ಕೂಡ ಅವರೇ ಆಗಿದ್ದಾರೆ.
ಬುಧವಾರ (ಸೆಪ್ಟೆಂಬರ್ 4) ದೋಷಾರೋಪ ಪಟ್ಟಿ ಕೋರ್ಟ್ ಕೈ ಸೇರುವ ಸಾಧ್ಯತೆ ಇದೆ. ಚಾರ್ಜ್ಶೀಟ್ನಲ್ಲಿ ನಾಲ್ಕು ಸಾವಿರ ಪುಟ ಇವೆ ಎನ್ನಲಾಗಿದೆ. ನೂರಾರು ಸಾಕ್ಷಿಗಳು, ಅನೇಕ ವರದಿಗಳು ಇದರಲ್ಲಿ ಇರಲಿವೆ. ಈ ಚಾರ್ಜ್ಶೀಟ್ನಲ್ಲಿ ದರ್ಶನ್ ಅವರನ್ನು ಎ2 ಇಂದ ಎ1 ಆರೋಪಿ ಆಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರತಿಯೊಂದು ಸಾಕ್ಷಿಗಳೂ ಕೂಡ ಪ್ರಕರಣಕ್ಕೆ ಅಷ್ಟೆ ಪ್ರಾಮುಖ್ಯತೆಯನ್ನ ಒದಗಿಸಿದ್ದು ದರ್ಶನ್ ಮನೆಯ ಸಿಸಿಟಿವಿ ರಿಟ್ರೀವ್ ಸಹ ಒಂದು ಮಹತ್ವದ ಸಾಕ್ಷಿಯಾಗಿದೆ. ಕೃತ್ಯ ಬಯಲಿಗೆ ಬಂದ ಬಳಿಕ ಡಿಲೀಟ್ ಆರೋಪಿಗಳು ದರ್ಶನ್ ಮನೆಗೆ ಸೇರಿ ಮೀಟಿಂಗ್ ಮಾಡಿದ್ದರು ಏನ್ನುವ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಡಿವಿಆರ್‌ನನ್ನು ಎಫ್ ಎಸ್ ಎಲ್‌ಗೆ ರವಾನೆ ಮಾಡಿದ್ದರು. ಎಫ್ ಎಸ್ ಎಲ್ ಅಧಿಕಾರಿಗಳು ಡಿವಿಆರ್‌ನಲ್ಲಿರುವ ಡಿಲೀಟೆಡ್ ವೀಡಿಯೊವನ್ನ ಪುನಃ ಪಡೆದುಕೊಂಡಿದ್ದಾರೆ. ದರ್ಶನ್ ಅವರು ತಪ್ಪು ಮಾಡಿಲ್ಲ ಎಂಬರ್ಥದಲ್ಲಿ ಮಾತನಾಡಿದ ಸೆಲೆಬ್ರಿಟಿಗಳ ಹೇಳಿಕೆಗಳನ್ನೂ ಕೂಡ ಪೊಲೀಸರು ಅನಾಲೈಝ್ ಮಾಡ್ತಿದ್ದಾರೆ.
ಈ ಹಿನ್ನಲೆಯಲ್ಲಿ ಇವೆಲ್ಲವೂ ಜಾಮೀನಿಗೆ ತೊಂದರೆಯಾಗುವ ಸಾಧ್ಯತೆಗಳೂ ಹೆಚ್ಚಿದೆ. ಇನ್ನು ಚಾರ್ಜ್ ಶೀಟ್ ಸಲ್ಲಿಸೋದಕ್ಕೆ ಕೌಂಟ್‌ಡೌನ್ ಆರಂಬವಾಗಿದೆ. ಚಾರ್ಜ್ ಶೀಟ್‌ನಲ್ಲಿ, ಸಿಡಿ ಆರ್ ರಿಪೋರ್ಟ್ ಗಳು , ಬಟ್ಟೆಗಳ ಸ್ಯಾಂಪಲ್ಸ್ , ಸಿಸಿಟಿವಿ , ಎಫ್ ಎಸ್ ಎಲ್ ರಿಪೋರ್ಟ್‌ಗಳು , 164 ಹೇಳಿಕೆಗಳೆಲ್ಲಾದರ ಉಲ್ಲೇಖವಿದೆ . ರೇಣುಕಾಸ್ವಾನಿ ಕೊಲೆಗೆ ಬಳಕೆಯಾದ ವಸ್ತುಗಳು ಕೂಡ ಪೊಲೀಸರ ಬಳಿದೆ. ಕೊಲೆಗೆ ಮುನ್ನ ಸ್ಟೋನಿ ಬ್ರೂಕ್ ಸಿಬ್ಬಂಧಿಗಳ ಹೇಳಿಕೆ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ಹೇಳಿಕೆಗಳು ಸಾಕಷ್ಟು ಮಹತ್ವ ಪಡೆದಿದೆ. ಸದ್ಯ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ.