ಉತ್ತರ ಪ್ರದೇಶ:- ಇವರ್ಯಾರೋ ಡಿಫರೆಂಟ್ ವೆರಿ, ವೆರಿ ಡಿಫರೆಂಟ್. ಏನಪ್ಪಾ ಇವ್ರು ಈ ಡಿಫರೆಂಟ್ ಸಾಂಗ್ ಹೇಳ್ತಿದ್ದಾರೆ ಅಂದ್ಕೊಂಡ್ರಾ. ಹೂ ಮರ್ರೆ. ಇಲ್ಲೊಬ್ಬ ಮಹಿಳೆ ತಾನೆಷ್ಟು ಡಿಫರೆಂಟ್ ಅನ್ನೋದನ್ನು ಬಹಳ ಡಿಫರೆಂಟಾಗಿ ಬರೋ ಮೂಲಕ ತೋರಿಸಿಸಿಕೊಡ್ಟಿದ್ದಾರೆ. ಏನಿದು ಡಿಫರೆಂಟ್ ಮಹಿಳೆ ಸ್ಟೋರಿ ಅಂತೀರಾ ಇಲ್ಲಿ ನೋಡಿ. ಎಸ್, ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್ ಪರೀಕ್ಷೆಗೆ ಹಾಜರಾಗಿರುವ ಘಟನೆ ಜರುಗಿದೆ.
ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಕೊನೆಯ ದಿನವಾದ ಶನಿವಾರ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿದ್ದರು, ಅವರ ತಪಾಸಣೆ ಮಾಡುವಾಗ ಸೊಂಟದಲ್ಲಿ ಕಬ್ಬಿಣದ ಸರಳಿರುವುದು ಕಂಡುಬಂದಿದೆ. ಪರೀಕ್ಷೆ ಬೇಕಾದರೂ ಬಿಡುತ್ತೇನೆ ಆದರೆ ಯಾವುದೇ ಕಾರಣಕ್ಕೂ ಈ ಸರಪಳಿ ಮಾತ್ರ ತೆಗೆಯುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು.
ಉತ್ತರ ಪ್ರದೇಶದಲ್ಲಿ ನಡೆದ ಕಾನ್‌ಸ್ಟೆಬಲ್ ನೇಮಕಾತಿ ಸಂದರ್ಭದಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಹಾದು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರದ ಗೇಟ್ ಬಳಿ ಅಭ್ಯರ್ಥಿಗಳ ಕುಟುಂಬಸ್ಥರೂ ಹಾಜರಿದ್ದರು, ಆಕೆಯ ಮೈಮೇಲೆ ದೆವ್ವ ಬರುತ್ತಿತ್ತು, ಅನೇಕ ದೆವ್ವಗಳು ಆಕೆಯನ್ನು ಕಾಡುತ್ತಿವೆ. ಹಾಗಾಗಿ ತಾಂತ್ರಿಕರ ಸಹಾಯ ಪಡೆದು ಆ ಸರಪಳಿಯನ್ನು ಹಾಕಿರುವುದಾಗಿ ಹೇಳಿದ್ದಾರೆ.
10 ದೇಹಗಳು ಆಕೆಯನ್ನು ಬಿಟ್ಟು ಹೋಗಿದ್ದು, ಇದೀಗ 11ನೇ ಬೀಗವನ್ನು ತೆರೆಯುವುದು ಬಾಕಿ ಇದೆ ಎಂದು ಪೋಷಕರು ತಿಳಿಸಿದ್ದಾರೆ. ಮಹಿಳಾ ಅಭ್ಯರ್ಥಿಯನ್ನು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದರು. ಯಾವುದೇ ಸಾಧನ ಪತ್ತೆಯಾಗದಿದ್ದಾಗ, ವಿಶೇಷ ಕಣ್ಗಾವಲು ಕೈಗೊಳ್ಳಲು ಕೊಠಡಿ ಇನ್ಸ್‌ಪೆಕ್ಟರ್‌ಗೆ ಸೂಚಿಸಲಾಯಿತು.