ರೇಣುಕಾಸ್ವಾಮಿ ಕೊಲೆ ಕೇಸ್ʼಗೆ ಮತ್ತೊಂದು ಟ್ವಿಸ್ಟ್: ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ!

Share to all

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ & ಗ್ಯಾಂಗ್ ಮೇಲೆ ಚಾರ್ಜ್‌ಶೀಟ್‌ ಸಲ್ಲಿಸಲು ಪೊಲೀಸರು ಸಿದ್ಧಪಡಿಕೊಂಡಿದ್ದಾರೆ. ಕೋರ್ಟ್‌ಗೆ ಇಂದು ಚಾರ್ಜ್‌ಶೀಟ್‌ ಸಲ್ಲಿಸುವುದು ಅನುಮಾನ ಎನ್ನಲಾಗಿದೆ. ಇನ್ನೂ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್​ನ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಚಾರ್ಜ್​​​ಶೀಟ್​​​ನಲ್ಲಿ 3 ಆರೋಪಿಗಳ ಪಾತ್ರವಿಲ್ಲ ಎಂದು ಉಲ್ಲೇಖವಾಗಿದ್ದು,

ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್‌ ತಾವೇ ಕೊಲೆ ಮಾಡಿದ್ದಾಗಿ  ಕಾಮಾಕ್ಷಿಪಾಳ್ಯ ಪೊಲೀಸರಿಗೆ ಶರಣಾಗಿದ್ದರು. ಮೃತದೇಹ ಸಾಗಾಟ, ಶರಣಾಗತಿಯಾಗಲು ಮೂವರು ಭಾಗಿಯಾಗಿದ್ದಾಗಿ ಹೇಳಿಕೆ ನೀಡಿದ್ದು ಕೊಲೆಯಲ್ಲಿ ಮೂವರ ಪಾತ್ರ ಇಲ್ಲ ಎಂಬುದು ಚಾರ್ಜ್ ಶೀಟ್ ನಲ್ಲಿ ಗೊತ್ತಾಗಿದೆ.

ಚಾರ್ಜ್​​​ಶೀಟ್​​​ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪ ಹಾಗೂ ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪ ಪ್ರಸ್ತಾಪ ವೇಳೆ ನಿಖಿಲ್ ನಾಯ್ಕ್, ಕೇಶವಮೂರ್ತಿ, ಕಾರ್ತಿಕ್ ಮೇಲಿಲ್ಲ ಕೊಲೆ ಕೇಸ್ ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ಆರೋಪ ಹಾಗಾದ್ರೆ ಈ  ಮೂವರು ಆರೋಪಿಗಳಿಗೂ ಬೇಗ ಸಿಗುತ್ತಾ ಜಾಮೀನು ಎಂದು ಕಾದುನೋಡಬೇಕಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಪೊಲೀಸರು ವಿವರವಾಗಿ ತನಿಖೆ ಮಾಡಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಮೆಟಿರಿಯಲ್ ಎವಿಡೆನ್ಸ್​ಗಳನ್ನು ಕಲೆ ಹಾಕಿದ್ದಾರೆ. ಬೆಂಗಳೂರು, ಮೈಸೂರು, ಚಿತ್ರದುರ್ಗದ ಹಲವು ಕಡೆ ಮಹಜರು ಮಾಡಿದ್ದಾರೆ. ಹಲವಾರು ಸಿಸಿಟಿವಿ ಪರಿಶೀಲನೆ ನಡೆಸಿ ದೃಶ್ಯಗಳನ್ನು ಸಂಗ್ರಹ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿ ಹಲವರ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ. ಎಲ್ಲವನ್ನೂ ಚಾರ್ಜ್​ ಶೀಟ್​ನಲ್ಲಿ ನಮೂದಿಸಲಿದ್ದು, ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಪ್ರಕರಣದ ಇಂಚಿಂಚೂ ಮಾಹಿತಿ ಹೊರಗೆ ಬರಲಿದೆ.


Share to all

You May Also Like

More From Author