ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರವನ್ನ ನೇರವಾಗಿ ಬೆಳಗಾವಿ ರಸ್ತೆಗೆ ಸೇರಿಸುವ ಬೈಪಾಸ್ ರಸ್ತೆಯ ಟೋಲ್ ಸಂಗ್ರಹ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೇವಲ ಮೂರು ದಿನ ಮಾತ್ರ ಉಳಿದಿದೆ.
ಕಳೆದ ಕೆಲವು ದಿನಗಳ ಹಿಂದೆ ಟೋಲ್ ಸಂಗ್ರಹದ ದಿನಾಂಕ ಮುಗಿದಿತ್ತಾದರೂ, ಕೆಲವು ಕಾರಣಗಳಿಂದ ಸೆಪ್ಟೆಂಬರ್ 6ರ ವರೆಗೆ ಟೋಲ್ ಹಣ ಸಂಗ್ರಹ ಮಾಡುವುದಕ್ಕೆ ಸರಕಾರ ಅವಕಾಶ ನೀಡಲಾಗಿತ್ತು.
ಈಗ ಆ ದಿನವೂ ಬಂದಿರುವುದರಿಂದ ನಂದಿ ಹೈವೇದವರು ತಮ್ಮ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿ, ನೀವಿನ್ನೂ ಹೊರಡಬಹುದು ಎಂಬ ಸುತ್ತೋಲೆ ರವಾನಿಸಿದ್ದಾರೆ.