ಪೋಲೀಸರನ್ನು ಬಿಡದ ಕಮೀಷನರ್..ಗಣೇಶನ ಹೆಸರಲ್ಲಿ ವಸೂಲಿ ಮಾಡಿದರೆ ಹುಷಾರ್..ಉಪ ಪೋಲೀಸ ಆಯುಕ್ತರಿಂದ ಠಾಣೆಗಳಿಗೆ ಜ್ಞಾಪನಾ ಪತ್ರ..
ಹುಬ್ಬಳ್ಳಿ:- ಗಣೇಶ ಹಬ್ಬದ ಅಂಗವಾಗಿ ಠಾಣೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ನೆಪದಲ್ಲಿ ಜನರಿಂದ ಹಣ ವಸೂಲಿ ಮಾಡುವ ಪೋಲೀಸರಿಗೆ ಕಮೀಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ..ಯಾವುದೇ ಕಾರಣಕ್ಕೂ ಯಾರಿಂದಲೂ ಹಣ ವಸೂಲಿ ಮಾಡದಂತೆ ಉಪ ಪೋಲೀಸ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಅವರಿಂದ ಜ್ಞಾಪನಾ ಪತ್ರ ಕಳಿಸಲಾಗಿದೆ.
ಅವಳಿ ನಗರದಲ್ಲಿ ಗಣೇಶ ಹಬ್ಬಕ್ಕೆ ಜೂಜುಕೋರರು,ಬಡ್ಡಿ ದಂಧೆಕೋರರು,ಓಸಿ,ಡ್ರಗ್ ಪೆಡ್ಲರ್,ರೀಯಲ್ ಎಸ್ಟೇಟ್ ಸೇರಿದಂತೆ ಹಲವರ ಕಡೆ ಗಣೇಶ ಹಬ್ಬದ ಅಂಗವಾಗಿ ಸಿಬ್ಬಂದಿಗಳು ಹಣ ವಸೂಲಿ ಮಾಡುವುದು ಗಮನಕ್ಕೆ ಬಂದಿದೆ.
ಆ ಹಿನ್ನೆಲೆಯಲ್ಲಿ ಹಿಂದೆ ಏನು ನಡೆದಿದೆಯೋ ಗೊತ್ತಿಲ್ಲಾ ಇನ್ಮುಂದೆ ಪೋಲೀಸರಿಂದ ಹಣ ವಸೂಲಿ ಮಾಡುವಂತಿಲ್ಲಾ ಅಂತಾ ಅವಳಿ ನಗರದ ಎಲ್ಲಾ ಪೋಲೀಸ ಠಾಣೆ ಹಾಗೂ ಎಸಿಪಿಗಳಿಗೆ ಜ್ಞಾಪನಾ ಪತ್ರ ಕಳಿಸಿದ್ದಾರೆ.