ಗುಡ್ಡ ಕೊಳ್ಳೆ ಹೊಡದವರ ಮೇಲೆ ಕೇಸ್ ಹಾಕದ ಪೊಲೀಸರು…ರೈತನ ಟ್ರ್ಯಾಕ್ಟರ್ ಠಾಣೆಗೆ ತಂದು ಕೇಸ್ ಜಡಿತಾರೆ..ಇದೊಂಥರಾ ಪೋಲೀಸಗಿರಿ.

Share to all

ಗುಡ್ಡ ಕೊಳ್ಳೆ ಹೊಡದವರ ಮೇಲೆ ಕೇಸ್ ಹಾಕದ ಪೊಲೀಸರು…ರೈತನ ಟ್ರ್ಯಾಕ್ಟರ್ ಠಾಣೆಗೆ ತಂದು ಕೇಸ್ ಜಡಿತಾರೆ..ಇದೊಂಥರಾ ಪೋಲೀಸಗಿರಿ.

ನವಲಗುಂದ: ನವಲಗುಂದ ವೃತ್ತ ಪೊಲೀಸ್ ಅಧಿಕಾರಿಗಳು ಡಬಲ್ ಸ್ಟ್ಯಾಂಡರ್ಡ್ ಆಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಅದಕ್ಕೆ ಪುರಾವೆಗಳು ಸಿಕ್ಕಿವೆ.

ನವಲಗುಂದ ವೃತ್ತದ ವ್ಯಾಪ್ತಿಗೆ ಬರುವ ತುಪ್ಪದ ಕುರಹಟ್ಟಿ ಬಳಿ ಟ್ರ್ಯಾಕ್ಟರ್‌ನಲ್ಲಿ ಮರಳು ತುಂಬಿದ್ದಾರೆ ಎಂದು ಸುರೇಶ ಕೊಣ್ಣೂರ ಮಾಲೀಕತ್ವದ ರೈತನ ಟ್ರ್ಯಾಕ್ಟರ್‌ನ್ನ ಅಣ್ಣಿಗೇರಿ ಠಾಣೆಯ ಪೊಲೀಸರು, ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನವಲಗುಂದ ಗುಡ್ಡವೂ ಸೇರಿದಂತೆ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮತ್ತು ಮಣ್ಣು ಸಾಗಾಟ ನಡೆಯುತ್ತಿದ್ದರೂ ಪೊಲೀಸರು ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ಆದರೆ, ರೈತನ ಟ್ರ್ಯಾಕ್ಟರ್ ವಶಕ್ಕೆ ಪಡೆಯುತ್ತಿದ್ದಾರೆ.

ಮಂತ್ಲಿ ಸಮಸ್ಯೆಯಿದ್ದರೆ ಅದಕ್ಕೊಂದು ಬೋರ್ಡ್ ಹಾಕುವುದು ಒಳಿತು ಎಂದು ವ್ಯಂಗ್ಯವಾಡುವ ಸ್ಥಿತಿ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳು ಈ ಬಗ್ಗೆ ಗಮನ ಕೊಡಬೇಕಿದೆ.

ಉದಯ ವಾರ್ತೆ
ನವಲಗುಂದ


Share to all

You May Also Like

More From Author