ಉತ್ತರ ಪ್ರದೇಶ:– ತಿಂಡಿ ಕೊಡುವ ನೆಪದಪಲ್ಲಿ ಬಾಲಕಿಯ ಖಾಸಗಿ ಅಂಗ ಮುಟ್ಟಿ 70 ವರ್ಷದ ಮುದುಕನೋರ್ವ ವಿಕೃತಿ ಮೆರೆದ ಘಟನೆ ಜರುಗಿದೆ. ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದ್ದು, ಅಂಗಡಿಗೆ ಬಂದಂತಹ ಬಾಲಕಿಯ ಜೊತೆ ವೃದ್ಧನೊಬ್ಬ ವರ್ತಿಸಿದ್ದಾನೆ. ಸಪ್ಟೆಂಬರ್ 3 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಮೊಹಮ್ಮದ್ ಅನ್ವರ್ (70) ಎಂಬಾತನ ಪೆಟ್ಟಿ ಅಂಗಡಿಗೆ ತಿಂಡಿ ತಿನಿಸು ಖರೀದಿಸಲು ಬಂದಿದ್ದು, ಆ ಸಂದರ್ಭದಲ್ಲಿ ಚಾಕಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ಹತ್ತಿರ ಕರೆಸಿಕೊಂಡು ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ.
ಈತನ ಪೈಶಾಚಿಕ ಕೃತ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೀತಾಪುರ ಪೊಲೀಸರು ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅನ್ವರ್‌ನನ್ನು ಬಂಧಿಸಿದ್ದಾರೆ.