ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಎರಡು ದಿನಗಳಿಂದ ಅನೇಕ ಬೆಳವಣಿಗೆಗಳು ಆಗುತ್ತಿವೆ. ಪೊಲೀಸರು ದರ್ಶನ್ ಮತ್ತು ಗ್ಯಾಂಗ್ ಕಂಬಿಯಿಂದ ಖಾಯಂ ಆಗಿ ಅಟ್ಟುವ 3991 ಪುಟಗಳ ಬೃಹತ್ ಚಾರ್ಜ್ಶೀಟ್ನ್ನೇ ರೆಡಿ ಮಾಡಿ ಕೂತಿದ್ದಾರೆ. ಇದರ ನಡುವೆ ಈ ಗ್ಯಾಂಗ್ ಡಿಲೀಟ್ ಮಾಡಿದ್ದ ಹಲ್ಲೆಯ ಫೋಟೋ ರಿಟ್ರೀವ್ ಮಾಡಿಕೊಳ್ಳಲಾಗಿದ್ದು. ದರ್ಶನ್ ಮತ್ತು ಆ ಪರಮಪಾಪಿಗಳ ಗ್ಯಾಂಗ್ ನಡೆಸಿದ ಕ್ರೌರ್ಯದ ಒಂದೊಂದೇ ಕುರುಹುಗಳ ಸಾಕ್ಷಿಯಾಗಿ ನಿಂತಿವೆ ಫೋಟೋಗಳು.
ಇನ್ನೂ ರ್ಶನ್ ಬಳಸುತ್ತಿದ್ದ ಫೋನ್ ಐಫೋನ್ 15 ಪ್ರೋ ಆಗಿದ್ದು ಇದು ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುತ್ತದೆ ಎನ್ನಲಾಗಿದೆ. ದರ್ಶನ್ ಪವಿತ್ರಾ ಗೌಡ ಅವರ ಹೆಸರನ್ನು ಪವಿತ್ರಾ ಗೌಡ ಅಂತ ಸೇವ್ ಮಾಡಿಕೊಂಡಿರಲಿಲ್ಲವಂತೆ. ಗೆಳತಿ ಹೆಸರನ್ನ ದರ್ಶನ್ 3 ಹೆಸರಲ್ಲಿ ಸೇವ್ ಮಾಡಿದ್ದರು ಎನ್ನಲಾಗಿದೆ. PAVI, PAVIIII, PVITRA GOWDA ಹೆಸರಲ್ಲಿ ಸೇವ್ ಮಾಡಿದ್ದರು ಎನ್ನಲಾಗಿದೆ.ಆದರೆ ನಟ ಯಾವ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದರು ಎನ್ನುವುದು ತಿಳಿದು ಬಂದಿಲ್ಲ, ಆದರೆ ದರ್ಶನ್ ಮೊಬೈಲ್ನಲ್ಲಿ ಪವಿತ್ರಾ ಗೌಡ ಹೆಸರು ಸೇವ್ ಆಗಿರುವುದು ರಿಟ್ರೀವ್ ವೇಳೆ ಗೊತ್ತಾಗಿದ್ದು ಇದನ್ನು ಕೂಡಾ ಚಾರ್ಜ್ ಶೀಟ್ನಲ್ಲಿ ನಮೂದಿಸಲಾಗಿದೆ ಎನ್ನಲಾಗಿದೆ.