ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಡಿಡಿಟಿಪಿಯಲ್ಲಿ ಸಿಬ್ಬಂದಿಗಳ ಲಂಚಾವತಾರ ಕುರಿತು ಲೋಕಾಯುಕ್ತಕ್ಕೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ವಂತೆ.
ಹೌದು ಪಾಲಿಕೆಯ ನಗರಯೋಜನೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಬ್ರಷ್ಟಾಚಾರ ಕುರಿತಂತೆ ರಾಜೇಶ ಎಂಬುವರು ಜುಲ್ಯೆ ತಿಂಗಳಲ್ಲಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ.ಆ ದೂರಿನಲ್ಲಿ ಕಚೇರಿಯ ಇಂಜನೀಯರ್ ಸೇರಿದಂತೆ ಸಿಬ್ಬಂದಿಗಳು ಲಂಚ ಇಲ್ಲದೇ ಪ್ಯೆಲೇ ಮುಟ್ಟಲ್ವಂತೆ.ಲಂಚ ಕೊಡದೇ ಇದ್ದರೆ ಪ್ಯೆಲೇ ಮಾಯವಾಗತ್ತವೆ.ಆದ್ದರಿಂದ ಸಾರ್ವಜನಿಕರ ಹಿತದ್ರಷ್ಟಿಯಿಂದ ಲೋಕಾಯುಕ್ತರು ಡಿಡಿಟಿಪಿಯ ಮೇಲೆ ದಾಳಿ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಡಿಡಿಟಿಪಿಯಲ್ಲಿ ನಡೆಯುತ್ತಿರುವ ಬ್ರಷ್ಟಾಚಾರದ ಕುರಿತಂತೆ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಬೇಕಿದೆ ಮೇಜರ್ ಸರ್ಜರಿ ಅಂತಾ ಉದಯ ವಾರ್ತೆಯು ಕಳೆದ ಹದಿನ್ಯೆದು ದಿನದ ಹಿಂದೆ ವರದಿಯೊಂದನ್ನು ಪ್ರಸಾರ ಮಾಡಿತ್ತು.ಆ ಸುದ್ದಿಯ ಬೆನ್ನಲ್ಲೇ ಲೋಕಾಯುಕ್ತರಿಗೆ ನೀಡಿದ ದೂರಿನ ಕಾಫಿಯೊಂದು ಉದಯ ವಾರ್ತೆಗೆ ಲಬ್ಯವಾಗಿದೆ.
ಡಿಡಿಟಿಪಿಯ ಲಂಚಾವತಾರ ಕುರಿತು ದಕ್ಷ ಪಾಲಿಕೆಯ ಆಯುಕ್ತರು ಅಲ್ಲಿಯ ಬ್ರಷ್ಠಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಯೆಕೊಳ್ಳತಾರ ಕಾದು ನೋಡಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ.