ದರ್ಶನ್ʼಗೆ ಕುಂತ್ರೂ ಸಮಾಧಾನವಿಲ್ಲ.. ನಿಂತ್ರೂ ಸಮಾಧಾನವಿಲ್ಲ: ‘D’ಗ್ಯಾಂಗ್ ಕ್ರೌರ್ಯಕ್ಕೆ 10 ಗ್ರಾಂ ಮಣ್ಣು ಸಾಕ್ಷ್ಯ!

Share to all

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ವಿರುದ್ಧ ಒಂದೊಂದೇ ಸಾಕ್ಷ್ಯಗಳು ಬಯಲಾಗುತ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ನಟ ದರ್ಶನ್ ವಿರುದ್ಧ ಯಾವೆಲ್ಲ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ಬಹಿರಂಗವಾಗಿದೆ.

ಹೀಗಾಗಿ  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಂತಕರು ಇವರೇ ಎಂದು ಮಣ್ಣು ಸಹ ಬೊಟ್ಟು ಮಾಡಿ ತೋರಿಸಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ ಅಪರೂಪ ಎಂಬಂತೆ ಮಣ್ಣನ್ನು ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಯಲ್ಲಿದ್ದ ಮಣ್ಣನ್ನು ಹಾಗೂ ಶೆಡ್ ಬಳಿಯ ಮಣ್ಣನ್ನು ಪೊಲೀಸರು ಸಂಗ್ರಹಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳಿಸಿ ವರದಿ ಪಡೆದಿದ್ದಾರೆ.

ರಿಪೋರ್ಟ್‍ನಲ್ಲಿ ಆರೋಪಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಯಲ್ಲಿ ಇರುವ ಮಣ್ಣು ಹಾಗೂ ಶೆಡ್ ಬಳಿಯ ಮಣ್ಣು ಎರಡೂ ಒಂದೇ ಎಂದು ಕೃಷಿ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬುದನ್ನು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಶೂ ಹಾಗೂ ಚಪ್ಪಲಿಯಲ್ಲಿದ್ದ ಶೆಡ್‍ನಲ್ಲಿನ ಮಣ್ಣು ಸಹ `ಡಿ’ಗ್ಯಾಂಗ್‍ಗೆ ಕಂಟಕವಾಗಿ ಪರಿಣಮಿಸಿದೆ. ಚಾರ್ಜ್‍ಶೀಟ್‍ನಲ್ಲಿ ಮಣ್ಣಿನ ಅಂಶವನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್, ವಿನಯ್, ರಾಘವೇಂದ್ರನ ಶೂ ಹಾಗೂ ನಾಗರಾಜ್‍ನ ಚಪ್ಪಲಿಗೆ ಅಂಟಿದ್ದ ಮಣ್ಣನ್ನ ಸಂಗ್ರಹ ಮಾಡಿದ್ದರು. ಇದೀಗ ದೇಶದಲ್ಲೇ ಮೊದಲ ಬಾರಿಗೆ ಮಣ್ಣಿನ ವರದಿ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಪ್ರಕರಣ ಇದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Share to all

You May Also Like

More From Author