ರೈತ ಆತ್ಮಹತ್ಯೆ – ಸಾಲ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ಯಲ್ಲಪ್ಪ
ಕುಂದಗೋಳ –
ಸಾಲಭಾಧೆಯಿಂದ ಬೇಸತ್ತು ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಜಿಲ್ಲೆಯಲ್ಲಿ ಸಾಲಭಾಧೆಯಿಂದ ರೈತರು ಸಾವಿಗೆ ಶರಣಾಗುತ್ತಿರುವುದು ಕಂಡು ಬರುತ್ತಿದ್ದು ಅತಿವೃಷ್ಟಿಗೆ ಅನ್ನದಾತ ಕಂಗಾಲಾಗಿದ್ದು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಹೌದು ಜಿಲ್ಲೆಯಲ್ಲೂ ಕೂಡಾ ಸಾಲದ ಬಾಧೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ರೈತರು ಸಾವಿಗೀಡಾಗುತ್ತಿದ್ದು ಇದಕ್ಕೆ ಯಲ್ಲಪ್ಪ ಬಹದ್ದೂರಪ್ಪ ಪೂಜಾರ (68) ಆತ್ಮಹತ್ಯೆ ಮಾಡಿಕೊಂಡ ಬಡ ರೈತ ಸಾಕ್ಷಿಯಾಗಿದ್ದಾನೆ.ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಚಾಕಲಬ್ಬಿ ಗ್ರಾಮದವರಾಗಿರುವ ಈ ಒಂದು ರೈತ ಸಾಲಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೆನರಾ ಬ್ಯಾಂಕಿನಲ್ಲಿ ಮೂರು ಲಕ್ಷ ಹಾಗೂ ಕೈಗಡ 2 ಲಕ್ಷ ರೂಪಾಯಿ ಕೈಗಡ ರೂಪದಲ್ಲಿ ಸಾಲವನ್ನು ಮಾಡಿಕೊಂಡಿದ್ದನು.ಟ್ರ್ಯಾಕ್ಟರ್ ಸಾಲ 4.50 ಲಕ್ಷ ರೂಪಾಯಿ ಮಾಡಿದ್ದರು.ಮಳೆ ಬಾರದೆ ಬೆಳೆದ ಬೆಳೆಯಲ್ಲಾ ಹಾಳಾಗಿದ್ದು ಇದರಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಉದಯ ವಾರ್ತೆ ಕುಂದಗೋಳ