ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ನಲ್ಲಿ ಏನಿದೆ ಎಂಬ ವಿಚಾರ ಹೊರ ಬರುತ್ತಿದೆ. ದರ್ಶನ್ ಸೇರಿದಂತೆ 17 ಜನರು ಕೊಲೆ ಆರೋಪ ಹೊತ್ತಿದ್ದಾರೆ. ಈ ಮಧ್ಯೆ ದರ್ಶನ್, ಪವಿತ್ರಾ ಸೇರಿ ಅನೇಕ ಆಪ್ತರ ಹೇಳಿಕೆಯನ್ನು ಪಡೆಯಲಾಗಿದೆ. ಈ ಪೈಕಿ ಪವಿತ್ರಾ ಗೆಳತಿ ಸಮತಾ ಹೇಳಿಕೆಯೂ ಇಲ್ಲಿ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಇದರಲ್ಲಿ ದರ್ಶನ್ ಹಾಗೂ ಪವಿತ್ರಾ ಮಧ್ಯೆ ಕಿರಿಕ್ ಆಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಅದಲ್ಲದೆ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಚಾರ್ಜ್ಶೀಟ್ನಲ್ಲಿ ನಟ ಚಿಕ್ಕಣ್ಣನ ಹೇಳಿಕೆಯೂ ಉಲ್ಲೇಖ ಆಗಿದೆ. ಕೊಲೆ ಆರೋಪಿ ದರ್ಶನ್ ಅವರನ್ನು ಚಿಕ್ಕಣ್ಣ ಭೇಟಿ ಮಾಡಿದ್ದರು. ಕೊಲೆ ನಡೆಯುವ ದಿನ ಸ್ಟೋನಿಬ್ರೂಕ್ನಲ್ಲಿ ದರ್ಶನ್ ಹಾಗೂ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಈ ವೇಳೆ ರೆಸ್ಟೋರೆಂಟ್ನಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಚಿಕ್ಕಣ್ಣ ಅವರು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಚಾರ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ.
ನಟ ಚಿಕ್ಕಣ್ಣ ಹೇಳಿಕೆ
- ಜೂನ್ 8ರಂದು ಎ.ಪಿ ಅರ್ಜುನ್ ಕಛೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಬಗ್ಗೆ ಚರ್ಚೆ ಮಾಡ್ತಿದ್ದೆ
- ಆಗ ನಟ ಯಶಸ್ ಕರೆ ಮಾಡಿ ದರ್ಶನ್ ಮದ್ಯಾಹ್ನ ಸ್ಟೋನಿ ಬ್ರೂಕ್ ನಲ್ಲಿ ಊಟ ಅರೆಂಜ್ ಮಾಡಿದ್ದಾರೆ
- ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ, ಡೈರೆಕ್ಟಾಗಿ ಸ್ಟೋನಿ ಬ್ರೂಕ್ ಬರುವಂತೆ ಹೇಳಿದ್ರು
- ನಾನು ಬರಲು ಟ್ರೈ ಮಾಡುತ್ತೇನೆಂದು ಯಶಸ್‌ಗೆ ತಿಳಿಸಿದೆ
- 10 ನಿಮಿಷಗಳ ನಂತರ ದರ್ಶನ್ ಕರೆ ಮಾಡಿ ಬರುವಂತೆ ತಿಳಿಸಿದರು
- ನಾನು ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು 02-45ಕ್ಕೆ ಹೋದೆ
- ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜೊತೆಯಲ್ಲಿ ಸ್ಟೋನಿ ಬ್ರೂಕ್ ಗೆ ಹೋದೆ
- ನಾನು ಸಿದ್ದುನನ್ನು ಕಾರಲ್ಲಿ ಬಿಟ್ಟು ಡಿ ಬಾಸ್ ಸಪಾರಿ ಎಂಬ ಲಾಂಜ್‌ಗೆ ತೆರಳಿದೆ
- ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು ಊಟ ಮಾಡುತ್ತಿದ್ದರು
- ನಾನು ಕುಳಿತುಕೊಂಡಿದ್ದು ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡಿದೆ
- ನಾನು ಸಹ ಅವರುಗಳೊಂದಿಗೆ ಮಾತನಾಡಿಕೊಂಡು ಊಟ ಮಾಡುತ್ತಿದ್ದೆ
- ಆಗ ಪವನ್, ದರ್ಶನ್ ಬಳಿಗೆ ಬಂದು ಕಿವಿಯಲ್ಲಿ ಯಾವುದೋ ವಿಚಾರ ತಿಳಿಸಿದ್ರು
- ಆತನು ಕಿವಿಯಲ್ಲಿ ವಿಷ ತಿಳಿಸಿದ ನಂತರ ದರ್ಶನ್ ಮುಖಭಾವ ಬದಲಾವಣೆಯಾಗಿರುತ್ತದೆ
- ನಂತರ ದರ್ಶನ್ ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು
- ನಂತರ ಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆ ಎಂದು ದರ್ಶನ್ ತಿಳಿಸಿದರು
- ನಂತರ ಎಲ್ಲರೂ ಒಟ್ಟಿಗೆ ಕೆಳಗೆ ಬಂದಿದ್ದು ನಾನು ಅಲ್ಲಿಂದ ಹೊರಟು ಹೋದೆ
- ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೂಷ್
- ವಿನಯ್ ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಲ್ಲಿ ಅಲ್ಲಿಂದ ಹೋದ್ರು
- ಜೂನ್ 10 ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದ್ರು
- ನಾನು ಕೊಲೆಯ ಬಗ್ಗೆ ಸುದ್ದಿ ಮಾದ್ಯಮಗಳಲ್ಲಿ ನೋಡಿರುತ್ತೇನೆ
- ದರ್ಶನ್ ಕಿವಿಯಲ್ಲಿ ಬಂದು ಏನೋ ಹೇಳಿದ್ದ ಪವನ್ ಸಹ ಬಂದಿಸಿರುವುದು ತಿಳಿದು ಬಂದಿದೆ
- ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟ ಹಾಗೂ ಹಾಸ್ಯ ನಟನಾಗಿದ್ದೇನೆ
- ನನಗೆ ದರ್ಶನ್ ಬುಲ್ ಬುಲ್ ಚಿತ್ರದ ಸಮಯದಿಂದ ಪರಿಚಯವಾಗಿರುತ್ತದೆ
- ನಾನು ಅವರೊಂದಿಗೆ ಸುಮಾರು 03 ಚಿತ್ರಗಳಲ್ಲಿ ಹಾಸ್ಯನಟನಾಗಿ ಕೆಲಸ ಮಾಡಿರುತ್ತೇನೆ
- ರಾಬರ್ಟ್ ಸಿನಿಮಾದ ವೇಳೆ ಹೆಚ್ಚಾಗಿ ಅವರವರೊಂದಿಗೆ ಒಡನಾಟ ಹೊಂದಿರುತ್ತೇನೆ
- ದರ್ಶನ್ ಪವಿತ್ರಗೌಡ ರವರೊಂದಿಗೆ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದಿದೆ