ಬೆಂಗಳೂರು:- ಕಾನೂನು ಪಾಲಿಸೋ ಪೊಲೀಸರಿಂದಲೇ ನಿಯಮ ಉಲ್ಲಂಘನೆ ಆಗಿದೆ. ಎಸ್ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ದಂಡ ವಿಧಿಸುತ್ತಾರೆ. ಆದರೆ ಪೊಲೀಸರೇ ಇದೀಗ ಕಾನೂನು ಉಲ್ಲಂಘನೆ ಮಾಡುತ್ತಿದ್ದು, ಮಾದರಿ ಆಗಬೇಕಾದವರೇ ಇದೀಗ ತಪ್ಪು ಮಾಡುತ್ತಿದ್ದಾರೆ.
ಕಾನೂನು ಪಾಲೀಸೋ ಪೋಲಿಸರಿಂದಲೇ ಕಾನೂನು ಉಲ್ಲಂಘನೆ ಆಗಿದೆ. ದ್ವಿಚಕ್ರ ವಾಹನದಲ್ಲಿ ಮೂರು ಜನ ಕುಳಿತುಕೊಂಡು ದ್ವಿಚಕ್ರದಲ್ಲಿ ಪಯಣ ಮಾಡುತ್ತಿದ್ದಾರೆ. ಸೋಲದೇವನಹಳ್ಳಿ ಪೋಲಿಸರಿಂದ ಕಾನೂನು ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಚಿಕ್ಕಬಾಣಾವಾರ ಟ್ರಾಪಿಕ್ ಪೋಲೀಸ್ ಸ್ಟೇಷನ್ ಪಕ್ಕದಲ್ಲೆ ಘಟನೆ ಜರುಗಿದೆ.
ನಿಯಮ ಮೀರಿ ಮೂರು ಜನ ಸ್ಕೂಟರ್ ನಲ್ಲಿ ಪಯಣ ಮಾಡುತ್ತಿದ್ದರು. ಹೆಲ್ಮಟ್ ಧರಿಸದೆ
ವಾಹನ ಸಂಖ್ಯೆ KA 53 EJ 8087 ಇದರಲ್ಲಿ ಪಯಣ ಮಾಡುತ್ತಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.