ಶಿವಲಿಂಗದ ಮೇಲೆ ಕಾಲಿಟ್ಟ ಸ್ವಾಮೀಜಿಗೆ ಭಕ್ತರಿಂದ ಪಾದಪೂಜೆ! ವಿಡಿಯೋ

Share to all

ಕಲಬುರಗಿ: ದೇವರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಪೂಜೆ ಮಾಡುವುದನ್ನು ನಾವು ನೋಡೇ ಇರುತ್ತೇವೆ. ಆದ್ರೆ ಇಲ್ಲಿ  ಶಿವಲಿಂಗದ ಮೇಲೆ ‌ಕಾಲಿಟ್ಟು ಸ್ವಾಮೀಜಿ‌ ಒಬ್ಬರು ಪಾದ  ಪೂಜೆ ಮಾಡಿಸಿಕೊಂಡ ಘಟನೆ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಹಾಗಾಂವ ಗ್ರಾಮದಲ್ಲಿ‌ನಡೆದಿದೆ. ಪಂಚಗ್ರಹ ಹೀರೆಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರೆ ಪಾದ ಪೂಜೆ ಮಾಡಿಸಿಕೊಂಡ ಶ್ರೀಗಳಾಗಿದ್ದಾರೆ.

ಶಿವಲಿಂಗದ ಮೇಲೆ ಕಾಲಿಟ್ಟ ಸ್ವಾಮೀಜಿಯ ಪಾದಕ್ಕೆ ಹಾಲಿನಿಂದ ಅಭಿಷೇಕ ಮಾಡಿ ನಂತರ ಕುಂಕುಮ ಬಿಲ್ವ ಪತ್ರೆ ಮತ್ತು ಹೂಗಳಿಂದ ಭಕ್ತರು ಪೂಜೆ ಸಲ್ಲಿಸಿದ್ದಾರೆ. ಸ್ವಾಮೀಜಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಇದೀಗ ಪರ ವಿರೋಧದ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಆದರೆ ಮಠದ ಮೂಲಗಳ ಪ್ರಕಾರ ಇದು ಸಂಪ್ರದಾಯವಾಗಿದ್ದು ಶಿವಲಿಂಗ ಪ್ರಾಣ ಪ್ರತಿಷ್ಟಾಪನೆಗೂ ಈ ಪೂಜೆ ಸಾಮಾನ್ಯ ಅಂತ್ತಿದ್ದಾರೆ..


Share to all

You May Also Like

More From Author