ಹುಬ್ಬಳ್ಳಿ.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ ಡೊಂಬರ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರಾ.
ಪಟ್ಟಣದ ಸರಕಾರಿ ಶಾಲೆ ನಂಬರ 2 ರ ಶೌಚಾಲಯದ ಕಿಡಕಿ ಬದಲಿಸುವಂತೆ ಅಲ್ಲಿನ ಸಾರ್ವಜನಿಕರು ಮನವಿ ಸಲ್ಲಿಸಿದ್ದರು.ಮನವಿ ಆಧಾರಿಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ ಡೊಂಬರ ಸ್ಥಳ ವೀಕ್ಷಣೆಗೆ ತೆರಳಿದ್ದರಂತೆ.ಅಲ್ಲಿ ಮುಖ್ಯಾಧಿಕಾರಿ ವೀಕ್ಷಣೆ ಮಾಡುವಾಗ ಮಹಿಳೆಯೊಬ್ಬಳು ಅದನ್ನು ಮೋಬ್ಯೆಲ್ ದಲ್ಲಿ ವಿಡಿಯೋ ಮಾಡತಿದ್ದಾಗ ಏಕಾ ಏಕಿ ಮುಖ್ಯಾಧಿಕಾರಿ ನವೀನ ಸಾಹೇಬರು ಮಹಿಳೆಯ ಕ್ಯೆಯಲ್ಲಿಯ ಮೋಬ್ಯೆಲ್ ಕಸಿದುಕೊಂಡು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ,ಆ ಮಹಿಳೆಯರು ಪಟ್ಟಣ ಪಂಚಾಯತಿಗೆ ಬಂದು ಮುಖ್ಯಾಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ಪಟ್ಟಣ ಪಂಚಾಯತಿ ಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಹಿಳೆಗೆ ಸಮಾಧಾನಪಡಿಸಿ ಕಳಿಸಿದ್ದಾರೆ.
ಒಬ್ಬ ಅಧಿಕಾರಿಯಾಗಿ ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನುವ ಕಾಮನ್ ಸೆನ್ಸ ಇಲ್ಲದ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಪಾಠ ಹೇಳಬೇಕಿದೆ.
ಉದಯ ವಾರ್ತೆ ಕುಂದಗೋಳ