ಖಾಸಗಿ ವಿಡಿಯೋ ಹಿಡಿದು ಮಾಜಿ ಪ್ರೇಯಸಿಗೆ ಬೆದರಿಕೆ: ಬೃಂದಾವನ ನಟನ ವಿರುದ್ಧ FIR!

Share to all

ಕನ್ನಡ ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ನನ್ನ ಖಾಸಗಿ ಪೊಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ಮಾಜಿ ಪ್ರೇಯಸಿ ದೂರು ದಾಖಲಿಸಿದ್ದಾರೆ. ಹೌದು ಮಾಜಿ ಪ್ರೇಯಸಿಯ ಖಾಸಗಿ ಫೋಟೋ, ವಿಡಿಯೋ ಜಾಲತಾಣದಲ್ಲಿ ಹರಿಬಿಡುವುದಾಗಿ ವರುಣ್ ಆರಾಧ್ಯ ಬ್ಲಾಕ್  ಮೇಲ್ ಮಾಡಿದ್ದಾನೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ.

2019 ರಿಂದ ಪ್ರೇಮಿಗಳಾಗಿದ್ದ ವರುಣ್  ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು.  ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ.

ಲವ್ ನಲ್ಲಿ ಎಲ್ಲಾ  ಚೆನ್ನಾಗಿದ್ದಾಗ ಈ ವರುಣ್  ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದನಂತೆ. ಮೊಬೈಲ್ ನಲ್ಲಿ ಮಾಜಿ ಪ್ರೇಯಸಿ ಇದು ಯಾರ ಫೋಟೋಗಳು ಎಂದು ಪ್ರಶ್ನೆ  ಮಾಡಿದಾಗ ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾನಂತೆ.

ಈ ಬಗ್ಗೆ ಯಾರ ಬಳಿಯಾದ್ರು ಹೇಳಿದ್ರೆ ನಿನ್ನ ಖಾಸಗಿ ಫೋಟೋ, ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಹ ಹರಿಬಿಡುವುದಾಗಿ ಬೆದರಿಸಿದ್ದಾನೆ. ಹೀಗಾಗಿ ವರುಣ್ ನಿಂದ  ಯುವತಿ ಸಹ ದೂರವಾಗಿದ್ದಳು.

ಇದರಿಂದ ರೊಚ್ಚಿಗೆದ್ದ ವರುಣ್ ಕಳೆದ ವರ್ಷ ಆಕೆಯ ಖಾಸಗಿ ಫೋಟೋವನ್ನು ಆಕೆಯ ಮೊಬೈಲ್ ಗೆ ಕಳುಹಿಸಿನೀನು ಬೇರೆಯವರನ್ನು ಮದುವೆಯಾದರು ನಿನ್ನನ್ನು ನಿನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. ಹೀಗಾಗಿ

ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಪ್ರಾಣ ಬೆದರಿಕೆ ಹಾಕಿರುವ ವರುಣ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂತ್ರಸ್ಥೆ ಸದ್ಯ ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ವರುಣ್ ಆರಾಧ್ಯ  ಮೇಲೆ ಎಫ್ಐಆರ್  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ‌.


Share to all

You May Also Like

More From Author