ಶೋಭಾ ಶೆಟ್ಟಿ ಅವರು, ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದ ಮೊದಲು ತುಂಬಾ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ದಿನ ಹೋಗುತ್ತಿದ್ದಂತೆ ತುಂಬಾ ವೀಕ್ ಆಗ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಶೋಭಾ ಶೆಟ್ಟಿ ಬಿಗ್ ಬಾಸ್ಗೆ ಬಂದ ಮೊದಲ ವಾರ ಕೂಗಾಡಿದ್ದರು. ಮಂಜು ವಿರುದ್ಧ ಅವರು ಭರ್ಜರಿ ವಾದ ನಡೆಸಿದ್ದರು. ಇದನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದರು. ಅದೇ ಕೊನೆ ಅದಾದ ಬಳಿಕ ಶೋಭಾ ಥಂಡ್ ಆಗಿದ್ದಾರೆ.
ಮೊದಲ ಟಾಸ್ಕ್ನಲ್ಲಿ ಇಂಜುರಿ ಹಾಗೂ ಸೋಲಿನ ಕಾರಣಕ್ಕೆ ಶೋಭಾ ಕಣ್ಣೀರು ಹಾಕಿದ್ದರು. ಈಗ ಅವರು ಮತ್ತೆ ಅತ್ತಿದ್ದಾರೆ. ಶೋಭಾ ಶೆಟ್ಟಿ ಅಳುವಿನ ಹಿಂದೆ ಸಾಕಷ್ಟು ನೋವಿದೆ. ಅವರ ಉಗ್ರ ಸ್ವರೂಪ ಎಲ್ಲಿ ಹೋಯಿತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ನಲ್ಲಿ ಎರಡನೇ ರೌಂಡ್ನಲ್ಲಿ ಶೋಭಾಗೆ ಅವಕಾಶ ಕೊಡೋದಾಗಿ ಅವರ ತಂಡದ ನಾಯಕಿ ಮೋಕ್ಷಿತಾ ಹೇಳಿದ್ದರು. ಆದರೆ ಆ ಬಳಿಕ ಆಟವೇ ರದ್ದಾಗಿ ಹೋಯಿತು. ಇದು ಶೋಭಾಗೆ ಬೇಸರ ಮೂಡಿಸಿದೆ. ಆಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.