ಒಬ್ಬರಿಗೆ ಗುಂಡು ಹೊಡೆಯೋದು..ಹತ್ತ ಮಂದಿಗೆ ಹೆದರಿಸೋದು…ಹಣ ವಸೂಲಿ ಮಾಡೋದು ಕಮೀಷನರ್ ಕೆಲಸ..
ಹುಬ್ಬಳ್ಳಿ:-ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.ಅಲ್ರೀ ಅದು ಅಂತಿಂತಾ ಆರೋಪ ಅಲ್ಲಾ..ಕಮೀಷನರ್ ಎನ್.ಶಶಿಕುಮಾರ್ ಒಬ್ಬರಿಗೆ ಗುಂಡು ಹೊಡೆಯೋದು ಹತ್ತ ಮಂದಿಗೆ ಹೆದರಿಸೋದು ಗುಂಡು ಹೊಡಿತೇನಿ ಅಂತಾ ವಸೂಲಿ ಮಾಡೋದಂತೆ.
ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಮತ್ತು ಅವರ ಸಿಬ್ಬಂದಿ ವರ್ಗ ಸಂಪೂರ್ಣವಾಗಿ ವಸೂಲಿ ದಂಧೆಗೆ ಇಳಿದಿದ್ದಾರೆ.ಜನರ ಅನುಕೂಲಕ್ಕಾಗಿ ಏನೂ ಕೆಲಸ ಮಾಡತಿಲ್ಲಾ…ಹುಬ್ಬಳ್ಳಿ-ಧಾರವಾಡದಲ್ಲಿ.. ಮಟಕಾ..ಗಾಂಜಾ..ಇಸ್ಪೀಟ್ ಕ್ಲಬ್ ಗಳು..ರೀಯಲ್ ಎಸ್ಟೇಟ್ ..ಕ್ರಿಕೆಟ್ ಬೆಟ್ಟಿಂಗ್..ನಂತಹ ದಂಧೆಗಳು ಅತ್ಯಂತ ಸರಳವಾಗಿ ನಡಿದಿವೆ.ಕೆಲ ಪೋಲೀಸ ಅಧಿಕಾರಿಗಳು ಹಾಗೂ ಪೋಲೀಸರು ನಮ್ನ ಇಲಾಖೆಗೆ ಏನಾಗಿದೆರೀ ಅಂತಾ ನಮ್ಮ ಮುಂದೆ ಬೇಸರ ಹೊರಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ ಹಾಗೂ ಸಿಬ್ಬಂದಿ ವರ್ಗದವರ ವಿರುದ್ದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ವಿಶೇಷವಾಗಿ ಮನವಿ ಮಾಡತೇನಿ ಹುಬ್ಬಳ್ಳಿ-ಧಾರವಾಡದಲ್ಲಿ ಏನ ನಡಿದಿದೆ ಅಂತಾ ಗಮನಿಸಿ ಇಮಿಡಿಯೇಟ್ ಕ್ರಮಕೈಕೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿದ್ದಾರೆ.