ಶೋಕಿಗಾಗಿ ಕಾಕಾನ ಮನೆಗೆ ಕನ್ನ ಹಾಕಿದ ಯುವಕ….ಒಳ್ಳೆ ಹೆಸರಿರುವ ಗದಗಕರ ಪ್ಯಾಮಿಲಿಗೆ ಕೆಟ್ಟ ಹೆಸರು ತಂದ ಮಗ…

Share to all

ಶೋಕಿಗಾಗಿ ಕಾಕಾನ ಮನೆಗೆ ಕನ್ನ ಹಾಕಿದ ಯುವಕ….ಒಳ್ಳೆ ಹೆಸರಿರುವ ಗದಗಕರ ಪ್ಯಾಮಿಲಿಗೆ ಕೆಟ್ಟ ಹೆಸರು ತಂದ ಮಗ…

ಹುಬ್ಬಳ್ಳಿ:- ಅಮೇರಿಕಾದಲ್ಲಿ ಓದಬೇಕು..ಬ್ರ್ಯಾಂಡೆಡ್ ಬಟ್ಟೆ ಖರೀದಿಸಬೇಕು..ಪ್ಯಾಶನ್ ಮಾಡಬೇಕು ಅಂತಾ ಕಾಕಾನ ಮನೆಗೆ ಕನ್ನ ಹಾಕಿದ್ದ ಬೂಪನನ್ನು ಕಸಬಾ ಪೇಟೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಪತ್ತೆ ಹಚ್ಚಿದ್ದಾರೆ.

ಹಳೇಹುಬ್ಬಳ್ಳಿಯ ಇಸ್ಲಾಂಪುರ ಓಣಿಯಲ್ಲಿರುವ ಪ್ರತಿಷ್ಠಿತ ಹೂವಿನ ವ್ಯಾಪಾರಿ ಗದಗಕರ ಮನೆಗೆ ಕನ್ನ ಹಾಕಿದ್ದ ತಮ್ಮನ ಮಗ ಮುಸ್ಸಬ್ಬೀರ ಗದಕರ 194 ಗ್ರಾಂ ಚಿನ್ನವನ್ನು ಎಗರಿಸಿದ್ದ…ಹುಬ್ಬಳ್ಳಿಯ ಕಸಬಾ ಪೋಲೀಸ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.

ದೂರು ದಾಖಲಿಸಿಕೊಂಡ ಪಿಐ ರಾಘವೇಂದ್ರ ಹಳ್ಳೂರ ಪಿಎಸ್ಐ ಚಂದ್ರಶೇಖರ ಮದರಖಂಡಿ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author